ಗೋವಿಂದರಾಜನಗರ ವಾರ್ಡ:ಪಲ್ಸ್ ಪೋಲಿಯೋ ಜನ ಜಾಗೃತಿ ಅಭಿಯಾನ

ಗೋವಿಂದರಾಜನಗರ ವಾರ್ಡ:ಪಲ್ಸ್ ಪೋಲಿಯೋ ಜನ ಜಾಗೃತಿ ಅಭಿಯಾನ

225
0
SHARE

ಬೆಂಗಳೂರು(ಜ.27.2018):ಗೋವಿಂದರಾಜನಗರ ವಾರ್ಡ ಬಿ.ಬಿ.ಎಂ.ಪಿ.ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು “ಪಲ್ಸ್ ಪೋಲಿಯೋ ಜನ ಜಾಗೃತಿ ಅಭಿಯಾನ”ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ನಾಗರಿಕರು ಮತ್ತು ಬಿ.ಬಿ.ಎಂ.ಪಿ.ಆರೋಗ್ಯ ಇಲಾಖೆಯವರು ಭಾಗವಹಿಸಿದ್ದರು .ತದನಂತರ ಮಾತನಾಡಿದ ಬಿ.ಬಿ.ಎಂ.ಪಿ.ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು ಪೋಲಿಯೋ ಎರಡು ಹನಿ ಮಕ್ಕಳ ಜೀವ ರಕ್ಷಣೆ ಮಾಡುತ್ತದೆ .ಪೋಲಿಯೋ ಒಂದು ಭೀಕರರೋಗ ಮಕ್ಕಳಲ್ಲಿ ಅಂಗವಿಕಲತೆ ಮತ್ತು ನಾನ ರೋಗಗಳಿಗೆ ಕಾರಣವಾಗುತ್ತದೆ .ಪೋಲಿಯೋ ಎರಡು ಹನಿ ಐದು ವರ್ಷದ ಒಳಗಿನ ಮಕ್ಕಳಿಗೆ ಹಾಕುವುದರಿಂದ ಮಾರಕ ರೋಗ ಬರುವುದಿಲ್ಲ ,ಕಳೆದ ಬಾರಿ ಪೋಲಿಯೋ ಹನಿ ಹಾಕಿಸಿದ್ದರು ,ಮತ್ತೆ ಪೋಲಿಯೋ ಹನಿ ಹಾಕಿಸಿ ಯಾವುದೇ ತೊಂದರೆ ಇಲ್ಲ ಪೋಲಿಯೋ ಮುಕ್ತ ಭಾರತ ನಿರ್ಮಾಣ ಮಾಡಲು ಸಹಕರಿಸಿ ಎಂದರು.

ಬಿ.ಬಿ.ಎಂ.ಪಿ.ಆರೋಗ್ಯ ಕೇಂದ್ರ ಮತ್ತು ಸರ್ಕಾರಿ ಆಸ್ಪತ್ರೆ ಮಾಲ್ ಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಪೋಲಿಯೋ ಹನಿ ಲಸಿಕೆ ಹಾಕಲಾಗುತ್ತಿದೆ .ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವುದನ್ನು ಮರೆಯಬೇಡಿ ಎಂದು ಹೇಳಿದರು .

NO COMMENTS

LEAVE A REPLY