ಅಂತರ ಶಾಲೆಯ ಕರಾಟೆಯಲ್ಲಿ ಮೊದಲ ಸ್ಥಾನ ಪಡೆದ ತನ್ವಿ

ಅಂತರ ಶಾಲೆಯ ಕರಾಟೆಯಲ್ಲಿ ಮೊದಲ ಸ್ಥಾನ ಪಡೆದ ತನ್ವಿ

319
0
SHARE

ಮೈಸೂರು(ಜ.26.2018): ಇತ್ತೀಚೆಗೆ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಇಂಟರ್ ಸ್ಕೂಲ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಟಿ.ಎಂ. ತನ್ವಿ ಮೊದಲ ಸ್ಥಾನ ಪಡೆದಿದ್ದಾರೆ.

ಯಾದವಗಿರಿ ಇಕಾನ್ ಶಾಲೆಯಲ್ಲಿ 3 ನೇ ತರಗತಿ ವಿದ್ಯಾರ್ಥಿಯಾದ ಇವರು ಶಾಸಾಯ್ ಪ್ರಜ್ವಾಲ್ ಕರಾಟೆ ಶಾಲೆಯಲ್ಲಿ ಕರಾಟೆ ಕಲಿಯುತ್ತಿದ್ದಾರೆ. ಇವಳು ವಿಜಯನಗರ 2 ನೇ ಹಂತ ಮೈಸೂರು ನಿವಾಸಿಗಳಾದ ವನಿತಾ ಮತ್ತು ಮಧುಸೂದನ್ ರವರ ಪುತ್ರಿ . ಮುಂಬರುವ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಹೆಚ್ಚು ಪದಕಗಳನ್ನು ಪಡೆದುಕೊಳ್ಳುತ್ತೇನೆ ಎಂದು ವೈಯಕ್ತಿಕವಾಗಿ ತಿಳಿಸಿದರು. ಆಕೆಯ ಪೋಷಕರು ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತಿದ್ದು ಮತ್ತು ತರಬೇತುದಾರರು ಮುಂದಿನ ಕರಾಟೆ ಚಾಂಪಿಯನ್ ಶಿಪ್ ಗೆ ಬಹಳಷ್ಟು ತರಬೇತಿಯನ್ನು ನೀಡಲಾಗುವುದು ಎಂದು ಹೇಳಿದರು.

NO COMMENTS

LEAVE A REPLY