ಯಾವ ಯಾವ ಜಿಲ್ಲೆಗಳಲ್ಲಿ ಮಹದಾಯಿ ಬಂದ್ ಸಫಲ..?

ಯಾವ ಯಾವ ಜಿಲ್ಲೆಗಳಲ್ಲಿ ಮಹದಾಯಿ ಬಂದ್ ಸಫಲ..?

295
0
SHARE

ಬೆಂಗಳೂರು (ಜ.25.2018): ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಹದಾಯಿಗಾಗಿ ಕನ್ನಡ ಪರ ಸಂಘಟನೆಗಳು ಬಂದ್ ನಡೆಸುತ್ತಿವೆ. ಕೆಲ ಜಿಲ್ಲೆಗಳಲ್ಲಿ ಬಂದ್’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ. ಕೆಲ ಪ್ರದೇಶಗಳಲ್ಲಿ ಬಂದ್’ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನೂ ಕೆಲ ಜಿಲ್ಲೆಗಳಲ್ಲಿ ಮಹದಾಯಿ ಬಂದ್ ಸಂಪೂರ್ಣ ವಿಫಲವಾಗಿದೆ.

ಬೀದರ್ ಜಿಲ್ಲೆಯಲ್ಲಿ ಬಂದ್ ವಿಫಲವಾಗಿದ್ದು, ಕಲಬುರಗಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ವಿಜಯಪುರ, ಯಾದಗಿರಿ ರಾಜಚೂರಿನಲ್ಲಿಯೂ ಕೂಡ ಮಹದಾಯಿ ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.ಹಾವೇರಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಾವಣಗೆರೆಯಲ್ಲಿಯೂ ಕೂಡ ಬಂದ್’ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದುರ್ಗ, ಹಾಸನ, ತುಮಕೂರು ಹಾಗೂ ಚಿಕ್ಕಬಳ್ಳಾಪುರದಲ್ಲಿಯೂ ಕೂಡ ಜನರಿಂದ ನೀರಸವಾದ ಪ್ರತಿಕ್ರಿಯೆ ದೊರಕಿದೆ. ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯದಲ್ಲಿಯೂ ಉತ್ತಮ ಪ್ರತಿಕ್ರಿಯೆ ದೊರಕಿಲ್ಲ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಂದ್’ ಸಂಪೂರ್ಣ ವಿಫಲವಾಗಿದೆ. ಯಾವುದೇ ರೀತಿಯಾದ ಬೆಂಬಲವೂ ಕೂಡ ವ್ಯಕ್ತವಾಗಿಲ್ಲ.  ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿಯೂ ಕೂಡ ಬಂದ್’ಗೆ ಯಾವುದೇ ರೀತಿಯಾದ ಬೆಂಬಲ ವ್ಯಕ್ತವಾಗಿಲ್ಲ.  ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ, ಕೊಡಗಿನಲ್ಲೂ  ಮಹದಾಯಿಗಾಗಿ ಬಂದ್ ವಿಫಲವಾಗಿದೆ.  ಕೋಲಾರ, ಮೈಸೂರು, ಚಾಮರಾಜನಗರದಲ್ಲಿಯೂ ಸಂಪೂರ್ಣ ವಿಫಲವಾಗಿದೆ.

ಇನ್ನು ಬಾಗಲಕೋಟೆ, ಬೆಳಗಾವಿ ಹಾಗೂ ಗದಗದಲ್ಲಿ ಬಂದ್ ಸಫಲವಾಗಿದೆ. ಧಾರವಾಡ, ಕೊಪ್ಪಳ, ಬಳ್ಳಾರಿಯಲ್ಲಿಯೂ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಂದ್’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ನಗರದಲ್ಲಿ ಮಹದಾಯಿ ಬಂದ್ ಸಂಪೂರ್ಣ ಸಫಲವಾಗಿದೆ.

NO COMMENTS

LEAVE A REPLY