ಈ ಬಾರಿಯು ನೀಟ್ ಪರೀಕ್ಷೆ ಪಠ್ಯಕ್ರಮದಲ್ಲಿ ಬದಲಾವಣೆ ಇಲ್ಲ..

ಈ ಬಾರಿಯು ನೀಟ್ ಪರೀಕ್ಷೆ ಪಠ್ಯಕ್ರಮದಲ್ಲಿ ಬದಲಾವಣೆ ಇಲ್ಲ..

293
0
SHARE

ನವದೆಹಲಿ (ಜ.21.2018): ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷೆಗೆ ರಾಜ್ಯಗಳ ಪಠ್ಯಕ್ರಮವನ್ನೂ ಪರಿಗಣಿಸಲಾಗುವುದು ಎಂದು ಹೇಳಿದ್ದ ಕೇಂದ್ರ ಸರ್ಕಾರ ಇದೀಗ ಉಲ್ಟಾ ಹೊಡೆದಿದ್ದು, 2018 ರ ನೀಟ್ ಪಠ್ಯಕ್ರಮದಲ್ಲಿ ಯಾವುದೇ ಬಲದಾವಣೆ ಇಲ್ಲ ಎಂದು ತಿಳಿಸಿದೆ.

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಸಿ) ತನ್ನ ವೆಬ್‌ಸೈಟ್‌ನಲ್ಲಿ ಅಧೀಸೂಚನೆ  ಹೊರಡಿಸಿದ್ದು, 2018 ರ ನೀಟ್ ಪರೀಕ್ಷೆಯ ಪಠ್ಯಕ್ರಮದಲ್ಲಿ ಯಾವುದೇ ಬದಲವಣೆ ಇಲ್ಲ ಎಂದು ತಿಳಿಸಿದೆ. 2017 ರಲ್ಲಿ ಮೆ ೭ರಂದು ನೀಟ್ ಪರೀಕ್ಷೆಯನ್ನು ನಡೆಸಲಾಗಿತ್ತು. ಹೀಗಾಗಿ ಈ ವರ್ಷವೂ ಮೇ ಮೊದಲ ವಾರದಲ್ಲಿ ನೀಟ್ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.

NO COMMENTS

LEAVE A REPLY