ಅರ್ಧ ಹೆಲ್ಮೆಟ್ ಗೊಂದಲಕ್ಕೆ ಸ್ಪಷ್ಟನೆ ನೀಡಿದ ಸಾರಿಗೆ ಇಲಾಖೆ

ಅರ್ಧ ಹೆಲ್ಮೆಟ್ ಗೊಂದಲಕ್ಕೆ ಸ್ಪಷ್ಟನೆ ನೀಡಿದ ಸಾರಿಗೆ ಇಲಾಖೆ

340
0
SHARE

ಬೆಂಗಳೂರು(ಜ.21.2018) : ಅರ್ಧ ಹೆಲ್ಮೆಟ್ ಧರಿಸುವ ಕುರಿತು ಉಂಟಾಗಿರುವ ಗೊಂದಲಕ್ಕೆ ಸರ್ಕಾರ ತೆರೆ ಎಳೆದಿದೆ. ಸ್ಪಷ್ಟನೆ ಈ ಕುರಿತು ಸುತ್ತೋಲೆ ಹೊರಡಿಸಿದೆ.
ಸವಾರರು ಧರಿಸುವ ಹೆಲ್ಮೆಟ್‌ ಐಎಸ್‌ಐ ಮಾನದಂಡಕ್ಕೆ ಅನುಗುಣವಾಗಿದ್ದರೆ ಸಾಕು ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಫೆ.1ರಿಂದ ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬಂದಿ ಸವಾರರು ಅರ್ಧ ಹೆಲ್ಮೆಟ್ ಧರಿಸಬಹುದೇ? ಎಂಬ ಬಗ್ಗೆ ಗೊಂದಲ ಉಂಟಾಗಿತ್ತು.

ಕೆಲವು ದಿನಗಳ ಹಿಂದೆ ಮೈಸೂರು ನಗರ ಪೊಲೀಸರು ಅರ್ಧ ಹೆಲ್ಮೆಟ್ ಧರಿಸಿದ್ದ ವಾಹನ ಸವಾರರನ್ನು ತಡೆದಿದ್ದರು. ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದಿದ್ದರು. ಅರ್ಧ ಹೆಲ್ಮೆಟ್‌ಗಳನ್ನು ಧರಿಸುವಂತಿಲ್ಲ ಎಂದು ಸೂಚನೆ ನೀಡಿದ್ದರು.

ಮೈಸೂರು ನಗರ ಪೊಲೀಸರ ಕ್ರಮವನ್ನು ಶ್ಲಾಘಿಸಿದ್ದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು, ಎಲ್ಲಾ‌ ಕಡೆಯೂ ಐಎಸ್‌ಐ ಮಾರ್ಕ್‌ ಇರುವ ಹೆಲ್ಮೆಟ್‌ ಕಡ್ಡಾಯಕ್ಕೆ ಸೂಚನೆ ನೀಡಿದ್ದರು. ಇದರಿಂದಾಗಿ ಬೆಂಗಳೂರು ನಗರ ಪೊಲೀಸರು ಫೆ.1ರಿಂದ ಐಎಸ್‌ಐ ಮಾರ್ಕ್ ಹೊಂದಿರುವ ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂದು ಹೇಳಿದ್ದರು.

ಈ ಆದೇಶ ಜನರಲ್ಲಿ ಗೊಂದಲ ಉಂಟು ಮಾಡಿತ್ತು. ಅರ್ಧ ಹೆಲ್ಮೆಟ್ ಧರಿಸಬಹುದೇ?, ಬೇಡವೇ? ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಆದ್ದರಿಂದ ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿ ಸ್ಪಷ್ಟನೆ ನೀಡಿದೆ.

NO COMMENTS

LEAVE A REPLY