ಬಿ.ಜೆ.ಪಿ.ಪಕ್ಷದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಗಡೆ ವಿರುದ್ದ ಪ್ರತಿಭಟನೆ

ಬಿ.ಜೆ.ಪಿ.ಪಕ್ಷದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಗಡೆ ವಿರುದ್ದ ಪ್ರತಿಭಟನೆ

270
0
SHARE

ಬೆಂಗಳೂರು(ಜ.21.2018): ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮೌರ್ಯ ವೃತ್ತ ಗಾಂಧಿ ಪ್ರತಿಮೆ ಬಳಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಗಡೆ ವಿರುದ್ದ ಬಾರಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಕಾರ್ಯಕ್ರಮದಲ್ಲಿ ಕ.ವಿ.ಕಾ.ಅಧ್ಯಕ್ಷರಾದ ಎಸ್.ಮನೋಹರ್ ಮತ್ತು ಬೆಂಗಳೂರು ಜಿಲ್ಲಾ ಕೇಂದ್ರ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರಾದ ಜನಾರ್ಧನ್ ಮತ್ತು ಕಾಂಗ್ರೆಸ್ ವಕ್ತಾರರಾದ ಸಲೀಮ್ ಮತ್ತು ಕಾಂಗ್ರೆಸ್ ಮುಖಂಡರಾದ ರಾಮಕೃಷ್ಣ ,ಶೇಖರ್ ,ಮಹಿಳಾ ಕಾಂಗ್ರೆಸ್ ಆಶಾ ರಾಜು ,ಆಶಾ ,ಉಷಾ,ರಚನಾ ಮತ್ತು ಯುವ ಕಾಂಗ್ರೆಸ್ ನ ಶಂಕರ್ .ಜಿ.ಗೌಡ ,ಆಶಿಕ್ ಗೌಡ,ಅರುಣ ಹಾಗೂ ನೂರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು .

ತದನಂತರ ಮಾತನಾಡಿದ ಕ.ವಿ.ಕಾ.ಅಧ್ಯಕ್ಷರಾದ ಎಸ್.ಮನೋಹರ್ ರವರು ಬಿ.ಜೆ.ಪಿ.ಪಕ್ಷವು ರಾಷ್ಟಪೀತ ಮಹಾತ್ಮ ಗಾಂಧಿ ಓಲವು ಇಲ್ಲ,ಡಾ.ಬಿ.ಆರ್.ಅಂಬೇಡ್ಕರ್ ರವರ ಸಂವಿಧಾನ ಬಗ್ಗೆ ನಂಬಿಕೆಯಿಲ್ಲ ,ಕೋಮುವಾದಿ ಮತ್ತು ಜಾತಿವಾದ ಇವರಿಗೆ ನಂಬಿಕೆ .ಕರ್ನಾಟಕ ರಾಜ್ಯದಲ್ಲಿ ಅಶಾಂತಿ ಮೂಡಿಸಿ ರಾಜಕೀಯ ಲಾಭ ಪಡೆಯಲು ಪ್ರಯತೃ ಮಾಡುತ್ತಿದ್ದಾರೆ .ಪ್ರತಾಪ್ ಸಿಂಹ ,ಕೆ.ಎಸ್.ಈಶರಪ್ಪ ಇದೀಗ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಗಡೆ ಇವರಿಗೆ ಸಂವಿಧಾನ ಬಗ್ಗೆ ಗೌರವವಿಲ್ಲ .ಬಿ.ಜೆ.ಪಿ.ಪಕ್ಷವು ಆಚಾರ,ವಿಚಾರ ,ಸಂಪ್ರಾದಯ ಎಂದು ಹೇಳುತ್ತಾರೆ .ಅದರೆ ನಾಲಿಗೆ ಹರಿದಾಡುವ ಶಬ್ಬಗಳು ಇವರ ಘನತೆ ತಕ್ಕದಲ್ಲ .ಕರ್ನಾಟಕ ಜನರನ್ನು ದಾರಿ ತಪ್ಪಿಸಬಹುದು ಎಂದು ತಿಳಿದಿದ್ದಾರೆ ,ಕರ್ನಾಟಕ ಪ್ರಬುದ್ದ ಮತದಾರರು ಬುದ್ದಿವಂತರು ಕಳೆದ ಬಾರಿಯೇ ಸರಿಯಾಗಿ ಪಾಠ ಕಲಿಸಿದ್ದಾರೆ .

ಪ್ರಧಾನಿ ನರೇಂದ್ರ ಮೋದಿರವರು ಈ ಕೊಡಲೆ ಸಚಿವ ಸಂಪುಟದಿಂದ ಅನಂತ್ ಕುಮಾರ್ ಹೆಗ್ಗಡೆ ರವರನ್ನು ವಜಾ ಮಾಡಿ ,ದೇಶದಿಂದ ಗಡಿಪಾರು ಮಾಡಬೇಕಾಗಿ ಒತ್ತಾಯ ಮಾಡುತ್ತೆವೆ ಎಂದು ಹೇಳಿದರು .

NO COMMENTS

LEAVE A REPLY