ಮನೆ ಕಟ್ಟುವವರಿಗೆ ಗುಡ್ ನ್ಯೂಸ್…

ಮನೆ ಕಟ್ಟುವವರಿಗೆ ಗುಡ್ ನ್ಯೂಸ್…

483
0
SHARE

ಬೆಂಗಳೂರು(ಜ.21.2018): ಮನೆ ಕಟ್ಟಲು ಮರಳು ಸಿಗುತ್ತಿಲ್ಲ ಎಂಬ ಮಾತು ಇತ್ತೀಚೆಗೆ ಸಾಮಾನ್ಯವಾಗಿತ್ತು. ರಾಜ್ಯದಲ್ಲಿ ಮರಳು ಕೊರತೆ ಎದುರಾಗಿ ಬೆಲೆ ಗಗನಕ್ಕೇರಿತ್ತು. ಇದರಿಂದಾಗಿ ಮನೆಕಟ್ಟಲು ಬಡ, ಮಧ್ಯಮ ವರ್ಗದವರು ಹಿಂದೇಟು ಹಾಕುವಂತಾಗಿತ್ತು ಇದೆಲ್ಲಾ ಕೊನೆಯಾಗಲಿದೆ.

ನಾಳೆಯಿಂದ ಎಂ.ಎಸ್.ಐ.ಎಲ್. ಬ್ರಾಂಡ್ ನ ನೈಸರ್ಗಿಕ ಮರಳು ಮಾರಾಟ ಆರಂಭವಾಗಲಿದೆ. ಪ್ರತಿ ಟನ್ ಗೆ 4,000 ರೂ. ನಿಗದಿ ಮಾಡಲಾಗಿದೆ. ಸದ್ಯಕ್ಕೆ ಬೆಂಗಳೂರಿನ ಕೆ.ಆರ್. ಪುರಂ ಸಮೀಪದ ಚನ್ನಸಂದ್ರ, ರಾಮನಗರ ಜಿಲ್ಲೆಯ ಬಿಡದಿ, ದೊಡ್ಡಬಳ್ಳಾಪುರ, ತುಮಕೂರು ಜಿಲ್ಲೆ ಕ್ಯಾತ್ಸಂದ್ರ ಸೇರಿ ಹಲವು ಕಡೆಗಳಲ್ಲಿ ಎಂ.ಎಸ್.ಐ.ಎಲ್. ಬ್ರಾಂಡ್ ಮರಳು ಸಿಗಲಿದೆ.

ಮಲೇಷ್ಯಾದಿಂದ ನೈಸರ್ಗಿಕ ಮರಳನ್ನು ಆಮದು ಮಾಡಿಕೊಳ್ಳಲಾಗಿದ್ದು, 50 ಕೆ.ಜಿ. ಚೀಲದಲ್ಲಿ ಮಾರಾಟ ಮಾಡಲಾಗುತ್ತದೆ. ಟನ್ ಮರಳಿಗೆ 4000 ರೂ. ನಿಗದಿ ಮಾಡಲಾಗಿದ್ದು, ಸಾಗಣೆ ವೆಚ್ಚವನ್ನು ಪಡೆದು ಮನೆ ಬಾಗಿಲಿಗೆ ಮರಳನ್ನು ತಲುಪಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಹಂತ ಹಂತವಾಗಿ ಎಲ್ಲಾ ಕಡೆಗಳಲ್ಲಿ ಮರಳು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗ್ತಿದೆ.

NO COMMENTS

LEAVE A REPLY