ರೈತರ ಸಾಲ ಮನ್ನಾಕ್ಕೆ ಸರ್ಕಾರ ನಿರ್ಧಾರ..!

ರೈತರ ಸಾಲ ಮನ್ನಾಕ್ಕೆ ಸರ್ಕಾರ ನಿರ್ಧಾರ..!

444
0
SHARE

ಬೆಂಗಳೂರು(ಜ.21.2018):ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರ ಸಹಕಾರಿ ಬ್ಯಾಂಕ್‍ಗಳಲ್ಲಿದ್ದ 50 ಸಾವಿರದವರೆಗಿನ ಸಾಲ ಮನ್ನಾ ಮಾಡಿ ಜನಮನ್ನಣೆ ಗಳಿಸಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗ 2 ರಿಂದ 3ಲಕ್ಷದವರೆಗಿನ ಸಾಲ ಮನ್ನಾ ಮಾಡುವ ಮತ್ತೊಂದು ಮಹತ್ವದ ನಿರ್ಧಾರವನ್ನು ಬಜೆಟ್‍ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.

ಸಹಕಾರಿ ಬ್ಯಾಂಕ್‍ಗಳಲ್ಲಿದ್ದ 2.29 ಲಕ್ಷ ರೈತರ 50 ಸಾವಿರದವರೆಗಿನ ಒಟ್ಟು ಎಂಟೂವರೆ ಸಾವಿರ ಕೋಟಿ ರೂ. ಸಾಲಮನ್ನಾವನ್ನು ಸರ್ಕಾರ ಮಾಡಿತ್ತು. ಆದರೂ ರೈತರ ಸಂಕಷ್ಟ ತಪ್ಪಿಲ್ಲ. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿದ್ದ ಸಾಲ ಮನ್ನಾ ಮಾಡುವಂತೆ ಕೇಂದ್ರದ ನೆರವು ಕೋರಿದ್ದು, ಕೇಂದ್ರವು ಈ ಸಂಬಂಧ ಸ್ಪಂದಿಸಿಲ್ಲ. ಹಾಗಾಗಿ ರೈತರು ಸಹಕಾರ ಬ್ಯಾಂಕ್‍ಗಳಲ್ಲಿ ಮಾಡಿರುವ ಬಹುತೇಕ ಎಲ್ಲಾ ಸಾಲ ಮನ್ನಾ ಮಾಡುವ ನಿರ್ಧಾರವನ್ನು ಕೈಗೊಳ್ಳಲು ಮುಂದಾಗಿದೆ.

ಮೂರು ಲಕ್ಷದವರೆಗಿನ ಸಾಲ ಮನ್ನಾ ಮಾಡಿದರೆ 2 ಸಾವಿರ ಕೋಟಿಯಷ್ಟು ಸರ್ಕಾರದ ಮೇಲೆ ಹೊರೆ ಬೀಳುತ್ತದೆ. ರೈತರನ್ನು ಈ ನಿಟ್ಟಿನಲ್ಲಿ ಸ್ವಲ್ಪ ಋಣಮುಕ್ತರನ್ನಾಗಿ ಮಾಡಿದಂತಾಗುತ್ತದೆ ಎಂಬ ಚಿಂತನೆ  ಸಿದ್ದರಾಮಯ್ಯನವರದಾಗಿದ್ದು, ಈ ಬಗ್ಗೆ ಸಾಧಕ-ಬಾಧಕಗಳ ಚರ್ಚೆ ನಡೆಯುತ್ತಿದೆ. ಉತ್ತರ ಪ್ರದೇಶ ಪಂಜಾಬ್‍ನಲ್ಲಿ ಒಂದು ಲಕ್ಷದವರೆಗೆ ರೈತರ ಸಾಲ ಮನ್ನಾ ಮಾಡಲಾಗಿತ್ತು. ನಮ್ಮ ರಾಜ್ಯದಲ್ಲಿ 50 ಸಾವಿರದವರೆಗೆ ಸಾಲ ಮನ್ನಾ ಮಾಡಿದ್ದರು. ಈಗ 2 ರಿಂದ 3 ಲಕ್ಷದವರೆಗಿನ ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಳ್ಳುವ ಮೂಲಕ ಚುನಾವಣಾ ಸಂದರ್ಭದಲ್ಲಿ ರೈತರ ಮನ ಗೆಲ್ಲಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎನ್ನಲಾಗಿದೆ.

NO COMMENTS

LEAVE A REPLY