ಪ್ರಾಂಶುಪಾಲರಿಗೆ ಗುಂಡಿಟ್ಟ ವಿದ್ಯಾರ್ಥಿ..

ಪ್ರಾಂಶುಪಾಲರಿಗೆ ಗುಂಡಿಟ್ಟ ವಿದ್ಯಾರ್ಥಿ..

323
0
SHARE

ನವದೆಹಲಿ (ಜ.20.2018): 12 ನೇ ತರಗತಿ ವಿದ್ಯಾರ್ಥಿಯೊಬ್ಬ  ತಮ್ಮ ಕಾಲೇಜಿನ ಪ್ರಾಂಶುಪಾಲರನ್ನು ಶೂಟ್ ಮಾಡಿರುವ ವಿಚಿತ್ರ ಘಟನೆ ಹರ್ಯಾಣದಲ್ಲಿ ನಡೆದಿದೆ.

ಪ್ರಾಂಶುಪಾಲರು ಬೈದಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ತಂದೆಯ ಲೈಸೆನ್ಸ್ ಇರುವ ರಿವಾಲ್ವರ್ ತಂದು ಪ್ರಾಂಶುಪಾಲರನ್ನು ಶೂಟ್ ಮಾಡಿದ್ದಾನೆ. 3 ಬುಲೆಟ್’ಗಳು ದೇಹವನ್ನು ಹೊಕ್ಕಿದ್ದು ಪ್ರಾಂಶುಪಾಲರಾದ ರಿತು ಚಾಬ್ರಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ರಿವಾಲ್ವರ್ ಸಮೇತ  ಮಧ್ಯಾಹ್ನ ಕಾಲೇಜಿಗೆ ಬಂದ ವಿದ್ಯಾರ್ಥಿ ಪ್ರಾಂಶುಪಾಲರನ್ನು ನೋಡಬೇಕೆಂದು ಹೇಳಿದ. ಪ್ರಾಂಶುಪಾಲರ ರೂಮಿಗೆ ನುಗ್ಗಿದವನೇ ಅವರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಕಾಲೇಜಿನ ಸಿಬ್ಬಂದಿ ಹೇಳಿದ್ದಾರೆ.

NO COMMENTS

LEAVE A REPLY