ಶಿವಮೊಗ್ಗದಲ್ಲಿ ಟಿಪ್ಪು ಸುಲ್ತಾನ್ ಕಾಲದ 100 ಯುದ್ಧ ರಾಕೆಟ್ ಗಳು ಪತ್ತೆ…

ಶಿವಮೊಗ್ಗದಲ್ಲಿ ಟಿಪ್ಪು ಸುಲ್ತಾನ್ ಕಾಲದ 100 ಯುದ್ಧ ರಾಕೆಟ್ ಗಳು ಪತ್ತೆ…

283
0
SHARE

ಬೆಂಗಳೂರು(ಜ.20.2018):ಇದು ಕರ್ನಾಟಕದ ಮಟ್ಟಿಗೆ ಅತ್ಯಂತ ಸಂಚಲನ ಮೂಡಿಸುವ ಸುದ್ದಿ. ರಾಜ್ಯ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳಲ್ಲಿ ಈ ಪತ್ತೆ ಬಲು ಅಪರೂಪದ್ದು. ಕಾರಣ, 18 ನೇ ಶತಮಾನದ ಕಾಲದಲ್ಲಿ ಬಳಕೆಯಲ್ಲಿದ್ದ 100 ಕ್ಕೂ ಹೆಚ್ಚು ಯುದ್ಧ ರಾಕೆಟ್ ಗಳು ಪತ್ತೆಯಾಗಿರುವುದು.

ಇತ್ತೀಚೆಗೆ ಶಿವಮೊಗ್ಗದಲ್ಲಿ ತೆರೆದ ಬಾವಿಯೊಂದರಲ್ಲಿ ಹೂಳು ತೆಗೆಯುವ ವೇಳೆ ಈ ರಾಕೆಟ್ ಗಳನ್ನು ಪತ್ತೆ ಮಾಡಲಾಯಿತು. ಮೈಸೂರು ಸಾಮ್ರಾಜ್ಯವು ಆಂಗ್ಲೋ-ಮೈಸೂರು ಯುದ್ಧದ ಸಮಯದಲ್ಲಿ, ವಿಶೇಷವಾಗಿ ಟಿಪ್ಪು ಸುಲ್ತಾನ್ ಆಳ್ವಿಕೆಯ ಕೊನೆಯ ಎರಡು ಅವಧಿಯಲ್ಲಿ ಬಳಸಲ್ಪಟ್ಟ ರಾಕೆಟ್ ಗಳು ಇವು ಎಂದು `ಬೆಂಗಳೂರು ಮಿರರ್ ‘ ವರದಿ ಮಾಡಿದೆ.

ಈ ಪೈಕಿ ಕೇವಲ ಐದು ರಾಕೆಟ್ ಗಳು ಪರಿಚಿತ ಮಾದರಿಯವಾಗಿದ್ದು ಅವು ಈಗಲೂ ಅಸ್ತಿತ್ವದಲ್ಲಿವೆ ಎಂದು ತಿಳಿದುಬಂದಿದೆ; ಬೆಂಗಳೂರಿನ ಸರಕಾರಿ ಮ್ಯೂಸಿಯಂನಲ್ಲಿ ಮೂರು ಮತ್ತು ರಾಯಲ್ ಆರ್ಮರಿ, ವೂಲ್ವಿಚ್, ಯುಕೆಯಲ್ಲಿ ಎರಡು ರಾಕೆಟ್ ಮಾದರಿಗಳಿವೆ.

ಪತ್ತೆಯಾದ ರಾಕೆಟ್ ಗಳನ್ನು ಕೆಲವು ತಿಂಗಳ ಕಾಲ ಸಾರ್ವಜನಿಕರ ವೀಕ್ಷಣೆಯಿಂದ ಹೊರಗಿಟ್ಟು ಅಧ್ಯಯನ ಮಾಡಲಾಗುತ್ತದೆ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳೂ ಮಾಹಿತಿ ನೀಡಿದ್ದಾರೆ.
ಎರಡು ತಿಂಗಳ ಹಿಂದೆ ಪಾಳು ಬಾವಿ ಹೂಳೆತ್ತುವಾಗ ಪತ್ತೆಯಾದಾಗ ಇವುಗಳನ್ನು ಕೆಲವು ವಿಧದ ಚಿಪ್ಪುಗಳೆಂದು ಭಾವಿಸಲಾಗಿತ್ತು. ಆದರೆ ಇತಿಹಾಸಕಾರ ಡಾ H.M ಸಿದ್ಧಾನಾಗೌಡಾರ್ ಅವರನ್ನು ಇವುಗಳನ್ನು ರಾಕೆಟ್ ಎಂದು ಗುರುತಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ರಾಕೆಟ್ಗಳನ್ನು 700 ವರ್ಷಗಳ ಹಿಂದೆ ಯುದ್ಧಗಳಲ್ಲಿ ಬಳಸಲಾಗಿದೆ. ಆಗ ಹೈದರ್ ಅಲಿ ಆಳ್ವಿಕೆ ಮೈಸೂರುನಲ್ಲಿತ್ತು, ಕಬ್ಬಿಣದ ಕ್ಯಾಸಿಂಗ್ಗಳನ್ನು ಬಳಸಿ ರಾಕೆಟ್ ನಿರ್ಮಿಸಲಾಗಿದೆ. ಆದರೆ ಅದಕ್ಕಿಂತ ಮುಂಚೆ, ರಾಕೆಟ್ ಗಳು ಮರದ ಅಥವಾ ಪೇಪರ್ ಕ್ಯಾಸ್ಟಿಂಗ್ಗಳನ್ನು ಹೊಂದಿದ್ದವು. ಸುಧಾರಿತ ಮಾದರಿಯ ಕಬ್ಬಿಣದ ಕ್ಯಾಸಿಂಗ್ ಗಳು ಆ ಕಾಲದಲ್ಲಿನ ತಂತ್ರಜ್ಞಾನದ ದಕ್ಷತೆಗೆ ಸಾಕ್ಷಿಯಂತಿವೆ.

ಹೈದರ್ ಅಲಿಯ ತಂದೆ ಫಾಥ್ ಮುಹಮ್ಮದ್ ಮೈಸೂರು ಸಾಮ್ರಾಜ್ಯಕ್ಕೆ ಕೆಲಸ ಮಾಡುವ ಮೊದಲು ಕಾರ್ನಾಟಿಕ್ ನ ನವಾಬ್ ಗೆ ಕೆಲಸ ಮಾಡಿದ್ದರು. ನವಾಬರ ಅಡಿಯಲ್ಲಿ, ಅವರು ರಾಕೆಟ್ ಕಾರ್ಪ್ಗಳನ್ನು ನಿರ್ವಹಿಸಿದರು. ಆ ನಂತರ, ಈ ರಾಕೆಟ್ಗಳನ್ನು ಯುದ್ಧದ ಸಮಯದಲ್ಲಿ ಸಿಗ್ನಲಿಂಗ್ ಮಾಡಲು ಬಳಸಲಾಗುತ್ತಿತ್ತು, ಆದರೆ ಶಸ್ತ್ರಾಸ್ತ್ರಗಳಲ್ಲ. ಹೈದರ್ ಐರನ್ ಕೇಸಿಂಗ್ನೊಂದಿಗೆ ರಾಕೆಟ್ಗಳನ್ನು ಬಳಸಿದ ಮೊದಲ ವ್ಯಕ್ತಿಯಾಗಿದ್ದಾನೆ ಎಂಬುದು ಇತಿಹಾಸಕಾರರ ಅಭಿಮತ.

NO COMMENTS

LEAVE A REPLY