ಲೇಡಿ PSI ಮೇಲೆ ರೌಡಿಗಳಿಂದ ಲೈಂಗಿಕ ದೌರ್ಜನ್ಯ..

ಲೇಡಿ PSI ಮೇಲೆ ರೌಡಿಗಳಿಂದ ಲೈಂಗಿಕ ದೌರ್ಜನ್ಯ..

226
0
SHARE

ಬೆಂಗಳೂರು(ಜ.20.2018): ರಸ್ತೆಯಲ್ಲಿ ಸಿಗರೇಟು ಸೇದುತ್ತಿದ್ದ ನಾಲ್ವರನ್ನು ಪ್ರಶ್ನಿಸಿದ PSI ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ಜೀವನ್ ಭೀಮಾ ನಗರದ ತಿಪ್ಪಸಂದ್ರದಲ್ಲಿ ನಡೆದಿದೆ.

ರಾತ್ರಿವೇಳೆ ಚಾಕು ಹಿಡಿದುಕೊಂಡು ಸಾರ್ವಜನಿಕರನ್ನು ಹೆದರಿಸುತ್ತಿದ್ದ ಖದೀಮರನ್ನು ಹಿಡಿಯಲು ಮುಂದಾದಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ನಿನ್ನೆ ತಡರಾತ್ರಿ 2.30ರ ವೇಳೆ ಗಸ್ತಿನಲ್ಲಿದ್ದ ಮಹಿಳಾ ಪಿಎಸ್’ಐ ಸಾರ್ವಜನಿಕರ ಸಹಾಯದಿಂದ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಜೀಪ್’ನಲ್ಲಿ ಕಿರಾತಕರನ್ನು ಕರೆದೊಯ್ಯುವಾಗ ಮಹಿಳಾ ಪಿಎಸ್’ಐ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಬಂಧಿತರನ್ನು ವಿಜಯಾನಂದ(26), ಜೀತು(26), ಸಚಿನ್(27) ಹಾಗೂ ಅಖಿಲ್ ಜೋಸ್ ಎಂದು ಗುರುತಿಸಲಾಗಿದೆ.

ಸೆಕ್ಷನ್ 354(A) 504, 34, 509, 354(B) 506, 353, 332, 354 ಅಡಿ ಜೀವನ್ ಭೀಮಾನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ಮಹಿಳಾ ಪೊಲೀಸರಿಗೆ ಸೂಕ್ತ ರಕ್ಷಣೆ ಇಲ್ಲ ಎಂದಾದರೆ, ಇನ್ನು ಜನಸಾಮಾನ್ಯರ ಪಾಡೇನು ಎಂಬ ಮಾತುಗಳು ಕೇಳಿ ಬರುತ್ತಿವೆ.

NO COMMENTS

LEAVE A REPLY