ಮುಡುಕುತೊರೆ ಜಾತ್ರೆ ನಾಳೆಯಿಂದ ಪ್ರಾರಂಭೋತ್ಸವ…

ಮುಡುಕುತೊರೆ ಜಾತ್ರೆ ನಾಳೆಯಿಂದ ಪ್ರಾರಂಭೋತ್ಸವ…

614
0
SHARE

ತಿ.ನರಸಿಪುರ(ಜ.19.2018):ಐತಿಹಾಸಿಕ ಹಿನ್ನೆಲೆವುಳ್ಳ ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ, ಮುಡುಕುತೊರೆ ಜಾತ್ರೆ ಮಹೋತ್ಸವ ಜ.20 ನಾಳೆಯಿಂದ ಪ್ರಾರಂಭವಾಗಲಿದೆ.

ಹಲವು ವಿಧಿವಿಧಾನ ಉತ್ಸವಗಳಿಂದ ಕೂಡಿರುವ ಜಾತ್ರೆಯು ಸುಮಾರು 15 ದಿನಗಳ ಕಾಲ ನಡೆಯುವ ಬಹುದೊಡ್ಡ ಜಾತ್ರೆಯಾಗಿದೆ. ಅಂಕುರಾರ್ಪಣ ಉತ್ಸವದ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ನಂತರದಲ್ಲಿ ಪ್ರತಿದಿನವೂ ಕೂಡ ಉತ್ಸವಗಳು ನಡೆಯಲಿದ್ದು, ಪ್ರಧಾನವಾಗಿ ಬ್ರಹ್ಮರಥೋತ್ಸವ, ತೆಪ್ಪೋತ್ಸವ, ಗಿರಿಪ್ರದಕ್ಷಿಣೆ ಹಾಗೂ ಬಸವನಮಾಲೆ (ಪರ್ವತಪರಿಷೆ) ಉತ್ಸವದ ಮುಖೇನ ಜಾತ್ರೆಯು ತೆರೆ ಬೀಳಲಿದೆ.

ಈ ಸಂದರ್ಭದಲ್ಲಿ ಜಾತ್ರೆಗೆ ಲಕ್ಷಾಂತರ ಭಕ್ತಾದಿಗಳು ಬರುವ ನಿರೀಕ್ಷೆಯಿದೆ ಆದ್ದರಿಂದ ಬರುವ ಭಕ್ತಾದಿಗಳಿಗೆ ಹಲವು ಬಗೆಯ ಸೌಲಭ್ಯವನ್ನು ಒದಗಿಸಲು ದೇವಸ್ಥಾನದ ಆಡಳಿತ ಸಮಿತಿ ಮತ್ತು ಗ್ರಾಮ ಪಂಚಾಯತಿಯು ವಿವಿಧ ಯೋಜನೆ ರೂಪಿಸಿದೆ. ಪ್ರಮುಖವಾಗಿ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನಹರಿಸಿ ಜಾಗೃತಿ ಮೂಡಿಸಲಾಗುವುದು ಎಂದು ಮಾಹಿತಿ ನೀಡಲಾಗಿದೆ.
-ಚಂದ್ರಶೇಖರ್ ಬಿ.ಎನ್

NO COMMENTS

LEAVE A REPLY