ರಸ್ತೆ ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ ಅಚ್ಚರಿಯಾಗುವಷ್ಟು ದಂಡ ವಸೂಲಿ..!

ರಸ್ತೆ ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ ಅಚ್ಚರಿಯಾಗುವಷ್ಟು ದಂಡ ವಸೂಲಿ..!

183
0
SHARE

ಬೆಂಗಳೂರು(ಜ.19.2018): ರಸ್ತೆ ನಿಯಮ ಉಲ್ಲಂಘಿಸಿದ ಆರೋಪ ಪ್ರಕರಣ ಸಂಬಂಧ ಪ್ರಸ್ತುತ 2017-18ನೇ ರಾಜ್ಯದಾದ್ಯಂತ ವಾಹನ ಚಾಲಕರಿಂದ ತೆರಿಗೆ ಹಾಗೂ ದಂಡ ರೂಪದಲ್ಲಿ 102 ಕೋಟಿ ರೂ. ವಸೂಲಿ ಮಾಡಲಾಗಿದೆ ಎಂದು ಸಾರಿಗೆ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 14,98,449 ವಾಹನಗಳನ್ನು ತಪಾಸಣೆ ನಡೆಸಲಾಗಿದ್ದು, ಇದರಲ್ಲಿ ನಿಯಮ ಉಲ್ಲಂಘಿಸಿದ ಆರೋಪದಡಿ 1,89,599 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, 22,107 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕರ್ನಾಟದಲ್ಲಿ ಒಟ್ಟು 882 ಹೊಗೆ ತಪಾಸಣಾ ಕೇಂದ್ರಗಳಿದ್ದು, ಅವುಗಳ ಪೈಕಿ 370 ಕೇಂದ್ರಗಳು ಬೆಂಗಳೂರಿನಲ್ಲಿದೆ. ಒಟ್ಟು 84 ಕೇಂದ್ರಗಳು ನಿಯಮ ಪಾಲಿಸದೆ ಲೋಪ ಎಸಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ದಯಾನಂದ ಹೇಳಿದರು.

63 ಕೇಂದ್ರಗಳ ಭದ್ರತಾ ಠೇವಣಿಯನ್ನು ದಂಡದ ರೂಪದಲ್ಲಿ ಮುಟ್ಟುಗೋಲು ಹಾಕಿದ್ದೇವೆ. ಎರಡು ಕೇಂದ್ರಗಳ ಪರವಾನಗಿಯನ್ನು ರದ್ದುಪಡಿಸಿದ್ದೇವೆ. ಇನ್ನುಳಿದ 19 ಕೇಂದ್ರಗಳ ಮಾಲಕರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದೇವೆ ಎಂದು ತಿಳಿಸಿದರು.

ರೋಗಿಗಳು ಹಾಗೂ ಅವರ ಸಂಬಂಧಿಕರನ್ನು ಆಸ್ಪತ್ರೆಗೆ ಕರೆದೊಯ್ಯಲು ಓಮ್ನಿ ಆಂಬುಲೆನ್ಸ್ ವಾಹನಗಳು ಸುರಕ್ಷಿತವಲ್ಲ. ಹೀಗಾಗಿ, ಎಪ್ರಿಲ್ 1ರ ಬಳಿಕ ರಾಜ್ಯದಲ್ಲಿ ಅವುಗಳ ನೋಂದಣಿಗೆ ಅವಕಾಶವಿಲ್ಲ. ಚಾಲ್ತಿಯಲ್ಲಿರುವ ಓಮ್ನಿ ಆಂಬುಲೆನ್ಸ್‌ಗಳ ಬಗ್ಗೆಯೂ ಹೊಸ ಅಧಿಸೂಚನೆ ಹೊರಡಿಸುತ್ತೇವೆ ಎಂದರು.

NO COMMENTS

LEAVE A REPLY