ಚಿರತೆ ದಾಳಿ: ಮಹಿಳೆ ಸಾವು

ಚಿರತೆ ದಾಳಿ: ಮಹಿಳೆ ಸಾವು

262
0
SHARE

ರಾಮನಗರ(ಜ.18.2018):ದನ ಮೇಯಿಸಲೆಂದು ಹೋಗಿದ್ದ ಸಂಧರ್ಭದಲ್ಲಿ ಚಿರತೆ ದಾಳಿಯಿಂದ ಮಹಿಳೆಯು ಸಾವನ್ನಪ್ಪಿದ ಘಟನೆ ನಡೆದಿದೆ.

ಪುಟ್ಟಹಲಗಮ್ಮ(40) ಮೃತಪಟ್ಟ ಮಹಿಳೆ. ರಾಮನಗರ ತಾಲ್ಲೂಕಿನ ಚಿಕ್ಕಸೂಲಿಕೆರೆ ಗ್ರಾಮದವರು. ದಿನನಿತ್ಯದಂತೆ ದನ ಮೇಯಿಸಲೆಂದು ಕಾಡಿಗೆ ತೆರಳಿದ್ದ ಸಂಧರ್ಭದಲ್ಲಿ ಸರಿಸುಮಾರು
ಸಂಜೆ 5 ಘಂಟೆಯಲ್ಲಿ ಚಿರತೆ ದಾಳಿಗೆ ಒಳಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಘಟನೆ ನಡೆದಿರುವ ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು ಹಾಗೂ ಪದೇ ಪದೇ ಕಾಡು ಪ್ರಾಣಿಗಳ ಹಾವಳಿಯಿಂದ ಇಂತಹ ಹಲವು ಘಟನೆಗಳಿಗೆ ಬೇಸತ್ತಿದ್ದೇವೆ ಎಂದು ತಿಳಿಸಿದರು.

ಘಟನೆಗೆ ಸಂಬಂಧಿಸಿದಂತೆ ರಾಮನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

NO COMMENTS

LEAVE A REPLY