ನಟ ಕಾಶೀನಾಥ್ ನಿಧನಕ್ಕೆ ಸಂತಾಪ ಸೂಚಿಸಿ ಕಣ್ಣೀರಿಟ್ಟ ಉಪೇಂದ್ರ

ನಟ ಕಾಶೀನಾಥ್ ನಿಧನಕ್ಕೆ ಸಂತಾಪ ಸೂಚಿಸಿ ಕಣ್ಣೀರಿಟ್ಟ ಉಪೇಂದ್ರ

240
0
SHARE

ಬೆಂಗಳೂರು(ಜ.18.2018): ಹಿರಿಯ ನಟ, ನಿರ್ದೇಶಕ ಕಾಶೀನಾಥ್ ಅವರ ನಿಧನಕ್ಕೆ ಅವರ ಶಿಷ್ಯ ನಟ ಉಪೇಂದ್ರ ಸಂತಾಪ ಸೂಚಿಸಿ ಕಣ್ಣೀರಿಟ್ಟಿದ್ದಾರೆ.

ನಟ ಕಾಶೀನಾಥ್ ನಿವಾಸಕ್ಕೆ ಭೇಟಿ ನೀಡಿ ನಂತರ ಮಾಧ್ಯಮಗಳ ಜತೆ ಮಾತನಾಡಿದ ನಟ ಉಪೇಂದ್ರ, ಅವರು ನನ್ನ ಪಾಲಿನ ಗುರು, ಮಾರ್ಗದರ್ಶಕ ಹಾಗೂ ದೇವರು ಎಲ್ಲಾ ಆಗಿದ್ರು. ಅವರು ಇಷ್ಟು ಬೇಗ ಹೋಗಬಾರದಿತ್ತು. ಇದು ಶಾಕಿಂಗ್ ಅಂತಾ ಹೇಳಬಹುದು. ಇಷ್ಟು ಬೇಗ ನಮ್ಮಲ್ಲೆರನ್ನು ಬಿಟ್ಟು ಹೋಗುತ್ತಾರೆ ಅಂತಾ ಅಂದುಕೊಂಡಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಅವರಿಗೆ ಅನಾರೋಗ್ಯವಿತ್ತು ಎಂದು ನನಗೆ ತಿಳಿದಿರಲಿಲ್ಲ. ಅವರು ಯಾರ ಬಳಿನೂ ಏನನ್ನು ಹೇಳಿಕೊಳ್ಳಲ್ಲ. ಬೆಳಿಗ್ಗೆ ಸುದ್ದಿ ಬಂದಾಗ ನನಗೆ ಶಾಕ್ ಆಯಿತು. ನನ್ನ ಪಾಲಿಗೆ ಮಾತ್ರ ಅವರು ದೇವರು. ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ. ನನ್ನ ದೇವರು ಅವರು. ಅವರ ಸಾವು ಕನ್ನಡ ಚಿತ್ರರಂಗಕ್ಕೆ ತುಂಬಲಾಗದ ನಷ್ಟ  ಎಂದು ನಟ ಉಪೇಂದ್ರ ಹೇಳಿದರು.

NO COMMENTS

LEAVE A REPLY