ಜಗತ್ತಿನಲ್ಲೇ ಎಲ್ಲೂ ಇಲ್ಲದ ಆಂಧ್ರ ಸಿಎಂ ಹೊಸ ಆಫರ್: ರೂ 149ಕ್ಕೆ ಎಲ್ಲಾ ಸೇವೆ..!

ಜಗತ್ತಿನಲ್ಲೇ ಎಲ್ಲೂ ಇಲ್ಲದ ಆಂಧ್ರ ಸಿಎಂ ಹೊಸ ಆಫರ್: ರೂ 149ಕ್ಕೆ ಎಲ್ಲಾ ಸೇವೆ..!

223
0
SHARE

ನವದೆಹಲಿ(ಜ.18.2018): ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿಕೆ ಕೇಳಿ ಮೊಬೈಲ್ ಕಂಪನಿಯವರು ಬೆಸ್ತು ಬಿದ್ದಿದ್ದಾರೆ. ಜಗತ್ತಿನಲ್ಲೇ ಎಲ್ಲೂ ಇಲ್ಲದ ಹೊಸ ಆಫರ್ ನ್ನು ನಾಯ್ಡು ಘೋಷಿಸಿದ್ದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತಾಗಿದೆ.

ಜಿಯೋ ಆಫರನ್ನೇ ನಾಚಿಸುವಂತ ಬೆಲೆಗೆ ಬ್ರಾಡ್ ಬ್ಯಾಂಡ್, ಕೇಬಲ್ ಟಿವಿ ಸಂಪರ್ಕಗಳನ್ನು ನೀಡುವುದಾಗಿ ನಾಯ್ಡು ಹೇಳಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಭಾರತೀಯ ಕೈಗಾರಿಕೆಗಳ ಒಕ್ಕೂಟದ ಪಾರ್ಟ್ನರ್ ಶಿಪ್ ಶೃಂಗ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ.

ಆಂಧ್ರದಲ್ಲಿ ಕಾಪು ಸಮುದಾಯಕ್ಕೆ ಶೇ. 5 ಮೀಸಲಾತಿ

“ಪ್ರತಿ ಮನೆಗೂ ನಾನು ಬ್ರಾಡ್ ಬ್ಯಾಂಡ್ ಸಂಪರ್ಕ ನೀಡಬಲ್ಲೆ ಎಂಬುದನ್ನು ನಾನು ಹೆಮ್ಮೆಯಿಂದ ಹೇಳುತ್ತೇನೆ. 300 ಚಾನಲ್, ವಿಡಿಯೋ, ಉಚಿತ ಟೆಲಿಫೋನ್ ಮತ್ತು ವೈ-ಫೈ ಸಂಪರ್ಕವನ್ನು ಕೇವಲ ರೂ. 149 ರೂಪಾಯಿ ನೀಡುತ್ತೇವೆ. ಈ ರೀತಿಯ ಸೌಲಭ್ಯ ಜಗತ್ತಿನ ಎಲ್ಲೂ ಇಲ್ಲ,” ಎಂದು ನಾಯ್ಡು ಹೇಳಿದ್ದಾರೆ. ಇದೀಗ ಆಂಧ್ರದ ಜನರು ಸರಕಾರದ ರೂ. 149ರ ಆಫರ್ ಗೆ ಕಾತರದಿಂದ ಕಾಯುತ್ತಿದ್ದಾರೆ.

NO COMMENTS

LEAVE A REPLY