ಮತ್ತೆ ಸುದ್ದಿಯಲ್ಲಿ ಅನಂತ್ ಕುಮಾರ್ ಹೆಗಡೆ

ಮತ್ತೆ ಸುದ್ದಿಯಲ್ಲಿ ಅನಂತ್ ಕುಮಾರ್ ಹೆಗಡೆ

162
0
SHARE

ಬೆಳಗಾವಿ(ಜ.17.2017): ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಮತ್ತೊಮ್ಮೆ ಹೇಳಿಕೆಯ ಮೂಲಕ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಅವರು ಸುದ್ದಿಯಾಗಲು ಕಾರಣ ವಿವಾದಾತ್ಮಕ ಹೇಳಿಕೆಯಲ್ಲ. ಬುದ್ಧಿಜೀವಿಗಳ ವಿರುದ್ಧ ನಡೆಸಿದ ವಾಗ್ದಾಳಿ.

ಬೆಳಗಾವಿಯಲ್ಲಿ ನಡೆದ ಸ್ಕಿಲ್‌ ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಅನಂತ್ ಕುಮಾರ್ ಹೆಗಡೆ, ಸೋ ಕಾಲ್ಡ್‌ ಬುದ್ದಿಜೀವಿಗಳು ಹೇಳ್ತಾರೆ.. ಇಲ್ಲ,ಇಲ್ಲ ನೀವು ಮಾನವರಾಗಬೇಕು ಎಂದು.ಎಂಥ, ನಾನೇನು ದನವ, ಪ್ರಾಣಿಗಳ ತರ ಕಾಣ್ತೀನಾ? ಗೊತ್ತಿಲ್ಲ ಅವರಿಗೆ ದೃಷ್ಟಿ ದೋಷ ಆಗಿರಬೇಕು. ಬುದ್ದಿಜೀವಿ ಸಾಹಿತಿಗಳು ಇವತ್ತು ಬರೀತಾರೆ.ಅವರು ಬರೆದಿದ್ದೆಲ್ಲಾ ಸಾಹಿತ್ಯ,ಗೀಚಿದ್ದೆಲ್ಲಾ ಕಾವ್ಯ. ಅರ್ಥವೂ ಇಲ್ಲ,ತುದಿಯೂ ಇಲ್ಲ, ಬುಡವೂ ಇಲ್ಲ. ಗವರ್ನಮೆಂಟ್‌ ಸೈಟ್‌ಗಾಗಿ  ಪಟ್ಟ ಕಟ್ಟಿಕೊಳ್ಳುತ್ತಾರೆ ಎಂದು ಕಿಡಿಕಾರಿದ್ದಾರೆ.

NO COMMENTS

LEAVE A REPLY