ಸಾಮಾಜಿಕ ಮಾಧ್ಯಮದಲ್ಲಿ ದಾಖಲೆ ನಿರ್ಮಿಸಿದ ನವರಸ ನಾಯಕ..! ಇವರಿಗಿರುವ ಫಾಲೋಹರ್ಸ್ ಎಷ್ಟು ಗೊತ್ತಾ?

ಸಾಮಾಜಿಕ ಮಾಧ್ಯಮದಲ್ಲಿ ದಾಖಲೆ ನಿರ್ಮಿಸಿದ ನವರಸ ನಾಯಕ..! ಇವರಿಗಿರುವ ಫಾಲೋಹರ್ಸ್ ಎಷ್ಟು ಗೊತ್ತಾ?

303
0
SHARE

ಬೆಂಗಳೂರು(ಜ17.2018):ನವರಸ ನಾಯಕ ಜಗ್ಗೇಶ್ ಸಿನಿಮಾದಲ್ಲಿ ಮಾತ್ರವಲ್ಲ ಸಾಮಾಜಿಕ ಮಾಧ್ಯಮದಲ್ಲೂ ಹೊಸ ದಾಖಲೆ ಬರೆದಿದ್ದಾರೆ. ಸುದೀಪ್’ರಂತೆ ಇವರು ಟ್ವಿಟರ್’ನಲ್ಲಿ ಆಕ್ಟೀವ್’ಆಗಿ ಪ್ರೇಕ್ಷಕರೊಂದಿಗೆ ಸಿನಿಮಾ, ಸಮಾಜದ ಬಗ್ಗೆ ಚರ್ಚಿಸುತ್ತಾರೆ. ಒತ್ತಡದಲ್ಲಿರುವ ನೂರಾರು ಅಭಿಮಾನಿ, ಹಿತೈಷಿಗಳಿಗೆ ಸಾಂತ್ವನ ಹಾಗೂ ದೈರ್ಯ ತುಂಬುತ್ತಾರೆ.

ಈ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಜಗ್ಗೇಶ್ 3 ಲಕ್ಷ ಫಾಲೋ’ವರ್ಸ್’ಗಳನ್ನು ಹೊಂದುವ ಮೂಲಕ ನೂತನ ಮೈಲಿಗಲ್ಲು ಸಾಧಿಸಿದ್ದಾರೆ. 3 ಲಕ್ಷ ಫಾಲೋವರ್ಸ್’ಗಳನ್ನು ಹೊಂದಿರುವುದಕ್ಕೆ ಅಭಿಮಾನಿಗಳಿಗೆ ಧನ್ಯವಾದಗಳನ್ನು ಕೂಡ ಅರ್ಪಿಸಿದ್ದಾರೆ. ಇವರು 75 ಮಂದಿಯನ್ನು ಫಾಲೋ ಮಾಡುತ್ತಿದ್ದು, ಸುದೀಪ್, ಯಶ್, ದರ್ಶನ್, ರಕ್ಷಿತ್ ಶೆಟ್ಟಿ, ಗಣೇಶ್, ಕಿಶೋರ್ ಅವರಂತ ಮುಂತಾದ ಸಿನಿಮಾ ತಾರೆಯರಲ್ಲದೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಕೂಡ ಇದ್ದಾರೆ.

NO COMMENTS

LEAVE A REPLY