ಮೈಸೂರಿನ ಅಧ್ವಯ ಫಿಲ್ಮ್ ಇನಸ್ಟಿಟ್ಯೂಟ್ ಗೆ ಬೆಂಕಿ ಹಾಕಿದ ದುಶ್ಕರ್ಮಿಗಳು.

ಮೈಸೂರಿನ ಅಧ್ವಯ ಫಿಲ್ಮ್ ಇನಸ್ಟಿಟ್ಯೂಟ್ ಗೆ ಬೆಂಕಿ ಹಾಕಿದ ದುಶ್ಕರ್ಮಿಗಳು.

195
0
SHARE

ಮೈಸೂರು(ಜ.17.2018):ನಗರದ ಟಿ.ಕೆ. ಲೇಔಟ್ ನ, ಗಣೇಶ್ ಭಂಡಾರ್ ನಲ್ಲಿರುವ ಅಧ್ವಯ ಫಿಲ್ಮ್ ಇನಸ್ಟಿಟ್ಯೂಟ್ ಗೆ ದುಶ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ಮುಂಜಾನೆ 4:28 ರಲ್ಲಿ ಕಾರಿನಿಂದ ಬಂದ ಕಿಡಿಗೇಡಿಗಳು ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಬಂದು ಸಂಸ್ಥೆಯ ಮುಂಭಾಗದಲ್ಲಿರುವ ಬ್ಯಾನರ್ ಅನ್ನು ಬ್ಲೇಡ್ ನಿಂದ ಕತ್ತರಿಸಿ ಬೆಂಕಿ ಹಚ್ಚಿದ್ದಾರೆ ಬಿಸಿಲಿನ ತಡೆಗಾಗಿ ಛಾವಣಿಗೆ ಹಾಕಲಾಗಿದ್ದ ಹಸಿರು ಪರದೆಯು ಸಂಪೂರ್ಣ ಬೆಂಕಿಗಾವುತಿಯಾಗಿದ್ದು ಸಿ ಸಿ ಕ್ಯಾಮರಾಗಳಿಗೂ ಹಾನಿಉಂಟಾಗಿದೆ. ಮಾನ್ಯ ಮುಖ್ಯ ಮಂತ್ರಿಗಳ ನಿವೇಶನದ ಹತ್ತಿರವೇ ಇಂತಹ ಘಟನೆ ನಡೆದಿದ್ದು ಜನರಲ್ಲಿ ತೀವ್ರ ಆತಂಕ ಉಂಟುಮಾಡಿದೆ.

ಅಧ್ವಯ ಫಿಲ್ಮ್ ಇನಸ್ಟಿಟ್ಯೂಟ್ ನ ಮುಖ್ಯಸ್ಥರಾದ ಸೆಂದಿಲ್ ಘಟನೆಗೆ ಕಾರಣ ಏನು ಹಾಗೂ ಯಾರು ಮಾಡಿದ್ದಾರೆಂಬುದು ತಿಳಿದುಬಂದಿಲ್ಲ, ಪೋಲಿಸರಿಗೆ ದೂರು ದಾಖಲಿಸಿದ್ದೇವೆ ಎಂದು ಸಂತಾಪ ವ್ಯಕ್ತಪಡಿಸಿದರು. ಸರಸ್ವತಿ ಪುರಂ ಠಾಣೆಯಲ್ಲಿ ದೂರು ದಾಖಲಾಗಿದ್ದು ಕಿಡಿಗೇಡಿಗಳಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ.
ವರದಿ-ಚೈತ್ರ ಗೌಡ ಹಾಸನ್
ಚಿತ್ರ-ಆಕಾಶ್ ಕೃಷ್ಣ

NO COMMENTS

LEAVE A REPLY