ಅಂತರ್ಜಾತಿ ವಿವಾಹಕ್ಕೆ ಅಡ್ಡಿಪಡಿಸುವಂತಿಲ್ಲ:ಸುಪ್ರೀಂ ಕೋರ್ಟ್ ಆದೇಶ

ಅಂತರ್ಜಾತಿ ವಿವಾಹಕ್ಕೆ ಅಡ್ಡಿಪಡಿಸುವಂತಿಲ್ಲ:ಸುಪ್ರೀಂ ಕೋರ್ಟ್ ಆದೇಶ

242
0
SHARE

ನವದೆಹಲಿ(ಜ.17.2018): ಅಂತರ್ಜಾತಿ ವಿವಾಹಕ್ಕೆ ಯಾರೂ ಅಡ್ಡಿಪಡಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಮಂಗಳವಾರ ಮಹತ್ವದ ಆದೇಶ ನೀಡಿದೆ. ವಯಸ್ಕ, ಪುರುಷ ಹಾಗೂ ವಯಸ್ಕ ಮಹಿಳೆ ಅಂತರ್ಜಾತಿ ವಿವಾಹವಾಗುತ್ತಿದ್ದರೆ ಅವುಗಳಿಗೆ ಯಾವುದೇ ಖಾಪ್ (ಜಾತಿ) ಪಂಚಾಯಿತಿ, ಯಾವುದೇ ವ್ಯಕ್ತಿ ಅಥವಾ ಯಾವುದೇ ಸಂಘಟನೆಗಳು, ಸಮಾಜಗಳು ಅಡ್ಡಿಪಡಿಸುವಂತಿಲ್ಲ ಎಂದು ಮುಖ್ಯ ನ್ಯಾಯಾಧೀಶ ನ್ಯಾ| ದೀಪಕ್ ಮಿಶ್ರಾ, ನ್ಯಾ| ಎ.ಎಂ. ಖಾನ್ವಿಲ್ಕರ್ ಹಾಗೂ ನ್ಯಾ| ಡಿ.ವೈ. ಚಂದ್ರಚೂಡ ಅವರ ನ್ಯಾಯಪೀಠ ಹೇಳಿದೆ.

ಅಂತರ್ ಗೋತ್ರ ಅಥವಾ ಅಂತರ್ಜಾತಿ ವಿವಾಹಗಳ ವಿರುದ್ಧ ಕುಟುಂಬದ ಮರ್ಯಾದೆ ಎಂಬ ನೆಪದಲ್ಲಿ ಕೊಲೆಗಳು, ಕಿರುಕುಳ ಪ್ರಕರಣಗಳು ನಡೆಯುತ್ತಿವೆ. ಇವುಗಳನ್ನು ತಡೆಯುವುದು ಹೇಗೆ ಎಂಬ ಬಗ್ಗೆ ನ್ಯಾಯಾಲಯದ ಸಲಹೆಗಾರ ರಾಜು ರಾಮಚಂದ್ರನ್ ಅವರು ಸಲಹೆಗಳನ್ನು ನೀಡಬೇಕು. ಈ ಸಲಹೆಗಳನ್ನು ಆಧರಿಸಿ ತಾನು ತೀರ್ಪು ಪ್ರಕಟಿಸಲಿದ್ದೇನೆ ಎಂದೂ ನ್ಯಾಯಪೀಠ ತಿಳಿಸಿದೆ.

ಶಕ್ತಿ ವಾಹಿನಿ ಎಂಬ ಸ್ವಯಂಸೇವಾ ಸಂಸ್ಥೆಯೊಂದು ಅಂತರ್ಜಾತಿ ವಿವಾಹಗಳ ವಿರುದ್ಧ ನಡೆಯುತ್ತಿರುವ ಅಪರಾಧಗಳನ್ನು ನಿಯಂತ್ರಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

NO COMMENTS

LEAVE A REPLY