ದೇಶದ 6 ರಾಜ್ಯಗಳಲ್ಲಿ ಪದ್ಮಾವತ್’ ಚಿತ್ರ ನಿಷೇಧ

ದೇಶದ 6 ರಾಜ್ಯಗಳಲ್ಲಿ ಪದ್ಮಾವತ್’ ಚಿತ್ರ ನಿಷೇಧ

147
0
SHARE

ಚಂಡೀಗಢ(ಜ.17.2018): ನಟಿ ದೀಪಿಕಾ ಪಡುಕೋಣೆ ಅಭಿನಯದ ವಿವಾದಿತ ಪದ್ಮಾವತ್ ಚಿತ್ರಕ್ಕೆ ಇದೀಗ ಹರಿಯಾಣ ಸರ್ಕಾರವೂ ನಿಷೇಧ ಹೇರಿದೆ. ಪದ್ಮಾವತ್ ಚಿತ್ರಕ್ಕೆ ನಿಷೇಧ ಹೇರಿದ 6ನೇ ರಾಜ್ಯ ಆಗಿದೆ. ರಾಜ್ಯದ ಜನರ ಭಾವನೆ ಗಮನದಲ್ಲಿಟ್ಟುಕೊಂಡು ಪದ್ಮಾವತ್ ಚಿತ್ರ ಪ್ರದರ್ಶನ ನಿಷೇಧಿಸುವ ನಿರ್ಧಾರವನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಹರ್ಯಾಣ ಆರೋಗ್ಯ ಸಚಿವ ಅನಿಲ್ ಮಂಗಳವಾರ ಹೇಳಿದ್ದಾರೆ.

ಇದಕ್ಕೂ ಮುನ್ನ ಗುಜರಾತ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಾಖಂಡ ಸರ್ಕಾರಗಳು ಈಗಾಗಲೇ ಚಿತ್ರಕ್ಕೆ ನಿಷೇಧ ಹೇರಿವೆ.

NO COMMENTS

LEAVE A REPLY