ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ದಿಡೀರ್ ದಾಳಿ:ಬೇಜವಾಬ್ದಾರಿ ಅಧಿಕಾರಿಗಳ ವಿರುದ್ದ ಕ್ರಮ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ದಿಡೀರ್ ದಾಳಿ:ಬೇಜವಾಬ್ದಾರಿ ಅಧಿಕಾರಿಗಳ ವಿರುದ್ದ ಕ್ರಮ.

190
0
SHARE

ಬೆಂಗಳೂರು(ಜ.17.2018):ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ(ಗುಂಡಣ್ಣ)ರವರ ನೇತೃತ್ವದಲ್ಲಿ ಬಿ.ಬಿ.ಎಂ.ಪಿ.ವ್ಯಾಪ್ತಿಯ ರಮೇಶ್ ನಗರ ,ಮಾರತ್ ಹಳ್ಳಿ ಹೆಚ್.ಎ.ಎಲ್.ಕಂದಾಯ ಇಲಾಖೆಗೆ ಭೇಟಿ ನೀಡಿ ತಪಾಸಣೆ ಮಾಡಿದರು .

ಸ್ಥಾಯಿ ಸಮಿತಿ ಸದಸ್ಯರುಗಳಾದ ಗೌತಮ್ ಕುಮಾರ್ ಜಿ.ಕೃಷ್ಣಮೂರ್ತಿ,ನರಸಿಂಹ ನಾಯಕ್ ,ಮಂಜುನಾಥ್ ಶ್ರೀಮತಿ ಮಾಲತಿ ಸೋಮಶೇಖರ್ ,ಶ್ರೀಮತಿ ರಮೀಳಾ ಉಮಾಶಂಕರ್ ಭಾಗವಹಿಸಿದ್ದರು .ಹಾಜರಾತಿ ಪುಸ್ತಕ ಗುರುತಿನ ಪತ್ರ ಹಾಕಿಕೊಳ್ಳದೆ ಇರುವುದು ,ದಾಖಲೆ ಸಂಗ್ರಹ ಕೊಠಡಿ ಮತ್ತು ಕಛೇರಿಯ ಸ್ವಚ್ಚತೆ ಬಗ್ಗೆ ಪರಿಶೀಲನೆ ಮಾಡಿದರು.ಮಾರತಹಳ್ಳಿಯ ಕಂದಾಯ ಇಲಾಖೆ ದಾಖಲೆ ಸಂಗ್ರಹ ಕೊಠಡಿ ಕಳೆದ 2ತಿಂಗಳಿಂದ ಬಾಗಿಲು ಹಾಕಿಕೊಂಡು ಬಿ.ಬಿ.ಎಂ.ಪಿ.ಸಿಬ್ಬಂದಿ ವರ್ಗಾವಣೆಯಾದರು ,ದಾಖಲೆ ಸಂಗ್ರಹ ಕೊಠಡಿ ಬೀಗದ ಕೈ ನೀಡದೆ ಸತ್ತಾಯಿಸುತ್ತಿರುವುದು ಕಂಡು ಬಂತು .ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕದೇ ಇರುವುದು ಮತ್ತು ಹೆಚ್.ಎ.ಎಲ್.ಕಂದಾಯ ವಿಭಾಗದ ದಾಖಲೆ ಸಂಗ್ರಹ ಕೊಠಡಿ ಧೂಳುತುಂಬಿಕೊಂಡು ಸ್ವಚ್ಚತೆ ಇಲ್ಲದೇ ಇರುವುದು , ಗುರುತಿನ ಪತ್ರ ಕೊರಳಿಗೆ ಹಾಕದೇ ಇರುವುದು ಕಂಡು .ಸಿಬ್ಬಂದಿ ಮತ್ತು ಆಡಳಿತ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರು ಬಿ.ಬಿ.ಎಂ.ಪಿ.ನೌಕಕರಿಗೆ ಖಡಕ್ ಎಚ್ಚರಿಕೆ ನೀಡಿದರು .

ತದನಂತರ ಮಾತನಾಡಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣರವರು ಬೆಂಗಳೂರು ನಗರವನ್ನು ವಿಶ್ವವೇ ನೋಡುತ್ತಿದೆ .ನಮ್ಮ ಬಿ.ಬಿ.ಎಂ.ಪಿ.ಆಡಳಿತ ಅಷ್ಟೆ ವೇಗವಾಗಿ ಸಾಗಬೇಕು ,ಬಿ.ಬಿ.ಎಂ.ಪಿ.ನೌಕರರು “ಜನಸ್ನೇಹಿ”ಯಾಗಿರಬೇಕು .ಸಾರ್ವಜನಿಕರ ಕುಂದುಕೊರತೆಗಳಿಗೆ ತತಕ್ಷಣ ಸ್ಪಂದನೆ ಮಾಡಬೇಕು ,ಸಾರ್ವಜನಿಕರು ಕಛೇರಿಯಿಂದ ,ಕಛೇರಿಗೆ ಅಲೆಯಬಾರದು ,ಜನರ ಬಳಿಗೆ ಬಿ.ಬಿ.ಎಂ.ಪಿ.ಆಡಳಿತ ಇದು ನಮ್ಮ ಉದ್ದೇಶವಾಗಬೇಕು ,ಸುಮ್ಮ ಸುಮ್ಮನೆ ಕಾರಣ ನೀಡಿ ಕೆಲಸ ವಿಳಂಬ ಮಾಡುವ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು .

NO COMMENTS

LEAVE A REPLY