ತೆರೆ ಮೇಲೆ ಬರಲಿದೆ ಐಪಿಎಸ್ ಅಧಿಕಾರಿ ರೂಪಾ ಜೀವನ ಚರಿತ್ರೆ…

ತೆರೆ ಮೇಲೆ ಬರಲಿದೆ ಐಪಿಎಸ್ ಅಧಿಕಾರಿ ರೂಪಾ ಜೀವನ ಚರಿತ್ರೆ…

218
0
SHARE

ಬೆಂಗಳೂರು(ಜ.16.2018): ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಜೀವನ ಚರಿತ್ರೆ ಆಧರಿಸಿದ ಸಿನಿಮಾ ಬರುತ್ತಿದೆ ಅದಕ್ಕೆ ಅವರೂ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ನಿರ್ದೇಶಕ ಎಎಂಆರ್ ರಮೇಶ್ ಆ ಸಿನಿಮಾ ಮಾಡಲು ಮುಂದಾಗಿದ್ದರು. ರೂಪಾ ಅವರನ್ನು ಭೇಟಿ ಮಾಡಿದ್ದ ಎಎಂಆರ್ ರಮೇಶ್, ‘ ಒಬ್ಬ ಮಹಿಳಾ ಐಪಿಎಸ್ ಅಧಿಕಾರಿಯಾಗಿ ತಾವು ಸಲ್ಲಿಸುತ್ತಿರುವ ಸೇವೆಯ ಕುರಿತು ಒಂದು ಸಿನಿಮಾ ಮಾಡ್ಬೇಕು ಎಂದುಕೊಂಡಿದ್ದೇನೆ. ಅದಕ್ಕೆ ನಿಮ್ಮ ಅನುಮತಿ ಬೇಕು. ಜತೆಗೆ ಸಹಕಾರ ಬೇಕು ಅಂತ ಕೇಳಿದ್ರು. ಆಗಲೇ ಅವರೊಂದು ಸ್ಟೋರಿ ಲೈನ್ ಹೇಳಿದ್ರು. ಬಹುತೇಕ ಆ ಸ್ಟೋರಿ ಪಾಸಿಟಿವ್ ಆಗಿತ್ತು. ಅದಕ್ಕೆ ನಾನು ಅವಾಗ ಯೆಸ್ ಎಂದಿದ್ದೆ’ ಎಂದು ಹೇಳಿಕೊಂಡಿದ್ದಾರೆ ರೂಪಾ.

ಯಾವುದೇ ಕಾಂಟ್ರೋವರ್ಸಿ ಇನ್ಸಿಡೆಂಟ್ ತೆಗೆದುಕೊಂಡಿರಲಿಲ್ಲ. ಹಾಗಾಗಿ, ಸಿನಿಮಾ ಮಾಡಿ ಪರ್ವಾಗಿಲ್ಲ. ಆದ್ರೆ, ಜೈಲು ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಮಾರ್ ರಿಪೋರ್ಟ್ ಸರ್ಕಾರಕ್ಕೆ ಸಲ್ಲಿಕೆ ಆಗಬೇಕಿದೆ. ಅದು ತುಂಬಾ ತಡವಾಗಿದೆ. ತಡವಾಗಿದ್ದು ಯಾಕೆ ಅಂತ ನಾನೇ ಆರ್‌ಟಿಐ ಮೂಲಕ ಮಾಹಿತಿ ಕೇಳಿದ್ದೇನೆ. ಹಾಗಾಗಿ ಒಂದಷ್ಟು ಕಾಯಿರಿ, ಆಮೇಲೆ ಸಿನಿಮಾ ಮಾಡಿ ಅಂತ ಹೇಳಿದ್ದೇನೆ’ ಎಂದು ರೂಪಾ ಅವರು ಮಾಹಿತಿ ನೀಡಿದ್ದಾರೆ.

NO COMMENTS

LEAVE A REPLY