ಚುನಾವಣೆ ಯುದ್ಧದಲ್ಲಿ ಬಿಜೆಪಿಯವರು ಕೌವರವರು, ನಾವು ಪಾಂಡವರು:ಸಿದ್ದರಾಮಯ್ಯ

ಚುನಾವಣೆ ಯುದ್ಧದಲ್ಲಿ ಬಿಜೆಪಿಯವರು ಕೌವರವರು, ನಾವು ಪಾಂಡವರು:ಸಿದ್ದರಾಮಯ್ಯ

148
0
SHARE

ಬೆಂಗಳೂರು(ಜ.16.2018):ಮುಂದಿನ ವಿಧಾನಸಭೆ ಚುನಾವಣೆ ಮಹಯುದ್ದದ ಹಾಗೆ. ಇಲ್ಲಿ ಬಿಜೆಪಿಯವರು ಕೌರವರಾದರೇ ನಾವು ಪಾಂಡವರಿದ್ದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇನ್ನು ನಾವು ಅಗ್ರೆಸ್ಸಿವ್ ಆಗಿರೋಣ.ರಾಜ್ಯದ ಜನತೆ ಮುಂದೆ ಬಿಜೆಪಿಯವರು ಡೋಂಗಿ ಹಿಂದುತ್ವವನ್ನು ತೋರಿಸೋಣ. ಜತೆಗೆ ರಾಜ್ಯ ಸರ್ಕಾರದ ಸಾಧನೆ. ಕೇಂದ್ರ ಸರ್ಕಾರದ ವೈಪಲ್ಯವನ್ನು ರಾಜ್ಯದ ಜನತೆ ಮುಂದೆ ತೆರೆದಿಡೋಣ ಎಂದು ಕರೆ ನೀಡಿದರು.

ಎಚ್​​ಡಿಕೆ, ಬಿಎಸ್​ವೈ ತಿಪ್ಪರಲಾಗ ಹಾಕಿದರೂ ಗೆಲ್ಲುವುದಿಲ್ಲ. ನೂರಕ್ಕೆ ನೂರರಷ್ಟು ನಾವೇ ಅಧಿಕಾರಕ್ಕೆ ಹಿಡಿಯುತ್ತೇವೆ. ನಮ್ಮ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ. ಎಲ್ಲ ಪದಾಧಿಕಾರಿಗಳು ಕಷ್ಟ ಪಟ್ಟು ಕೆಲಸ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಶೋಭಾ ಕರಂದ್ಲಾಜೆ ಸುಮ್ಮನೇ ಸುಳ್ಳು ಹೇಳಿಕೊಂಡು ಗಲಾಟೆ ಮಾಡ್ತಾರೆ. ನಾವು ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ನಾವು ತಲೆ ತಗ್ಗಿಸುವ ಯಾವುದೇ ಕೆಲಸ ಮಾಡಿಲ್ಲ. ಸುಳ್ಳು ಹೇಳೋದು ಬೇಡ, ಸತ್ಯವನ್ನೇ ಬಲವಾಗಿ ಹೇಳೋಣ ಎಂದು ಸಿಎಂ ಸಿದ್ದರಾಮಯ್ಯ ಕೈ ಮುಖಂಡರಿಗೆ ಸೂಚಿಸಿದರು.

NO COMMENTS

LEAVE A REPLY