ಮೈಸೂರಿನಲ್ಲಿ ಸ್ವಚ್ಛ ಸರ್ವೇಕ್ಷಣಾ 2018 ಜಾಗೃತಿ ಕಾರ್ಯಕ್ರಮ :ಪರಕೆ ಹಿಡಿದು ಸ್ವಚ್ಛಗೊಳಿಸಿದ ಡಿಸಿ ಮತ್ತು ಮೇಯರ್..

ಮೈಸೂರಿನಲ್ಲಿ ಸ್ವಚ್ಛ ಸರ್ವೇಕ್ಷಣಾ 2018 ಜಾಗೃತಿ ಕಾರ್ಯಕ್ರಮ :ಪರಕೆ ಹಿಡಿದು ಸ್ವಚ್ಛಗೊಳಿಸಿದ ಡಿಸಿ ಮತ್ತು ಮೇಯರ್..

202
0
SHARE

ಮೈಸೂರು(ಜ.16.2018): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಮೈಸೂರು ಘಟಕ ಇಂದಿನಿಂದ ಹದಿನೈದು ದಿನಗಳ ಕಾಲ ಸ್ವಚ್ಛ ಸರ್ವೇಕ್ಷಣಾ 2018 ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದೆ.

ಇಂದಿನಿಂದ ಜನವರಿ 31ರವರೆಗೆ ಸ್ವಚ್ಚಭಾರತ ಅಭಿಯಾನವನ್ನು ನಗರದ ಆಯ್ದ ಪ್ರದೇಶಗಳಲ್ಲಿ ವಿಶೇಷವಾಗಿ ರೂಪಸಿದ್ದು, ಚಿತ್ರಕಲಾರಚನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಭಾಷಣ ಪ್ರಬಂಧ ರಚನೆ, ಸೈಕಲ್ ಜಾಥ ಮೂಲಕ ಜನರಲ್ಲಿ ಸ್ವಚ್ಛತೆಯ ಸಂದೇಶವನ್ನು ರವಾನಿಸುತ್ತಿದೆ. 15 ದಿನಗಳ ಈ ಪಾಕ್ಷಿಕ ಚಟುವಟಿಕೆಗಳಿಗೆ ಮೈಸೂರು ಜಿಲ್ಲಾಡಳಿತ ಹಾಗೂ ನಗರ ಪಾಲಿಕೆ ಸಹಕಾರ ನೀಡಿದ್ದು, ಜತೆಗೆ ಸಿಟಿಜನ್ಸ್ ಫೋರಂ ಫಾರ್ ಸ್ವಚ್ಛ ಮೈಸೂರು-2018 ಕೂಡ ಕೈ ಚೋಡಿಸಿದೆ.

ಇಂದು ನಗರದ ಬಲರಾಮ ಗೇಟ್ ಮುಂಭಾಗದ ಮೂರು ವೃತ್ತಗಳಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿದರು. ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್, ನಗರ ಪಾಲಿಕೆ ಮೇಯರ್ ಎಂ.ಜೆ ರವಿಕುಮಾರ್ ಹಲವರು ಪರಕೆ ಹಿಡಿದು ಕಸ ಗುಡಿಸುವ ಮೂಲಕ ಸ್ವಚ್ಛ ಸರ್ವೇಕ್ಷಣಾ 2018 ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

15 ದಿನಗಳ ಕಾಲ ಸಾರ್ವಜನಿಕ ಸ್ಥಳಗಳಾದ ಗ್ರಾಮಾಂತರ ಬಸ್ ನಿಲ್ದಾಣ, ಕೆಆರ್ ಆಸ್ಪತ್ರೆ ಆವರಣ, ಜಿಲ್ಲಾ ನ್ಯಾಯಾಲಯ, ಕೆ.ಆರ್ ಸರ್ಕಲ್ ಮುಂತಾದ ಕಡೆಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಎರಡು ಬಾರಿ ಸ್ವಚ್ಛ ನಗರಿ ಪಟ್ಟ ಅಲಂಕರಿಸಿದ್ದ ಮೈಸೂರು ನಗರವನ್ನು ಮತ್ತೊಮ್ಮೆ ಅದೇ ಸ್ಥಾನಮಾನ ಕಲ್ಪಿಸಲು ಈ ಮೂಲಕ ವಿಶೇಷ ಪ್ರಯತ್ನ ಮಾಡಲಾಗುತ್ತಿದೆ.

NO COMMENTS

LEAVE A REPLY