ಸಂಕ್ರಾಂತಿ ಸಂಭ್ರಮ….

  261
  0
  SHARE

  ಸಂಕ್ರಾಂತಿ ಸಂಭ್ರಮ….

  ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಈ ಹಬ್ಬವನ್ನು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಬಹುಮುಖ್ಯ ಗ್ರಾಮೀಣ ಹಬ್ಬವಾಗಿದೆ. ಸಂಕ್ರಾಂತಿ ಹಬ್ಬವನ್ನು ಮುಖ್ಯವಾಗಿ ರೈತರು ಅರ್ಥಪೂರ್ಣವಾಗಿ ಆಚರಿಸಲ್ಪಡುತ್ತಾರೆ. ಈ ಹಬ್ಬ ವರ್ಷದ ಪ್ರಾರಂಭದಲ್ಲಿ ಬರುವ ಮೊದಲನೆಯ ಹಬ್ಬವಾಗಿದೆ, ಸಂಕ್ರಾಂತಿಯನ್ನು ಎಳ್ಳುಬೆಲ್ಲದ ಹಬ್ಬ, ಸುಗ್ಗಿ ಹಬ್ಬ, ಪೊಂಗಲ್, ಹೀಗೆ ಹಲವು ಹೆಸರಿನಿಂದ ಕರೆಯಲಾಗುತ್ತದೆ.

  ಸಂಕ್ರಾಂತಿ ಹಬ್ಬದ ಮೊದಲನೆಯ ದಿನದಿಂದ ಉತ್ತರಾಯಣ ಆರಂಭವಾಗುತ್ತದೆ. ಪ್ರಾರಂಭದ 12ಗಂಟೆಯನ್ನು ಉತ್ತರಾಯಣ ಪುಣ್ಯಕಾಲವೆಂದು ಪರಿಗಣಿಸಿದ್ದಾರೆ. ಸೂರ್ಯ ಮಕರ ರಾಶಿಯಲ್ಲಿರುವಾಗ ಮಾಘಮಾಸದಲ್ಲಿ ಸೂರ್ಯೋದಯ ಕಾಲಕ್ಕೆ ಸರಿಯಾಗಿ ಸ್ನಾನ ಮಾಡುವುದರಿಂದ ಸರ್ವವಿಧ ಪಾಪಗಳು ನಶಿಸಿತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಸಂಕ್ರಾಂತಿಯ ದಿನದಂದು ಎಲ್ಲರೂ ಸ್ನಾನಮಾಡಿ ಶುಭ್ರವಾದ ಹೊಸ ಬಟ್ಟೆ ಧರಿಸುತ್ತಾರೆ. ವಿಷೇಶವಾಗಿ ಹೆಣ್ಣು ಮಕ್ಕಳು ಶೃಂಗಾರಗೊಂಡು “ಕೊಬ್ಬರಿ ಚೂರು, ಕಡ್ಲೆಕಾಯಿ, ಬೆಲ್ಲದ ಚೂರುಗಳಿಂದ ಸಂಸ್ಕರಿಸಿದ ಎಳ್ಳು ಮತ್ತು ಕಬ್ಬಿನ ಚೂರುಗಳನ್ನು” ಬಂಧು ಗಳಿಗೆ, ಸ್ನೇಹಿತರ ಮನೆಗಳಿಗೆ ಮನೆಗಳಿಗೆ ಹೋಗಿ ನೀಡುತ್ತಾರೆ.

  ಎಳ್ಳು-ಬೆಲ್ಲವನ್ನು ನೀಡುವುದರ ಹಿಂದೆ ಒಂದು ವೈಜ್ಞಾನಿಕ ಕಾರಣವು ಇದೆ ಅದೇನೆಂದರೆ ಚಳಿಗಾಲದಲ್ಲಿ ಜನರ ದೈಹಿಕ ಉಷ್ಣಾಂಶ ಕಡಿಮೆಯಾಗಿರುತ್ತದೆ ಎಳ್ಳು ಬೆಲ್ಲ ತಿನ್ನುವುದರಿಂದ ದೇಹದ ಉಷ್ಣಾಂಶ ಹೆಚ್ಚಿ ಸಮತೋಲನವಾಗುತ್ತದೆ ಎಂಬುದಾಗಿದೆ. ಎಳ್ಳು ಸಕ್ಕರೆ-ಅಚ್ಚುಗಳನ್ನು ನೆರೆಯವರಿಗೆ ಬಂಧು-ಮಿತ್ರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯ ಈ ಹಬ್ಬದ ಒಂದು ಭಾವಪೂರ್ಣ ವಿಶೇಷ.

  ಗ್ರಾಮೀಣ ಪ್ರದೇಶದಲ್ಲಿ ರೈತರು ತಾವು ವರ್ಷವಿಡೀ ಕಷ್ಟಪಟ್ಟು ಬೆಳೆದ ಫಸಲು ಕೈಗೆ ಬಂದ ಸಂಭ್ರಮವಂತೂ ವಿಶಿಷ್ಟವಾಗಿದೆ. ಅದೇ ರೀತಿ ಹಸುಗಳನ್ನು ತೊಳೆದು ಅವುಗಳ ಕೊಂಬಿಗೆ ಬಣ್ಣ ಬಳಿದು ಅಲಂಕಾರ ಮಾಡಿ ಜಾನುವಾರುಗಳಿಗೆ ಹುಗ್ಗಿ ತಿನ್ನಿಸುತ್ತಾರೆ ನಂತರ ಬೀದಿಗಳಲ್ಲಿ ಬಿ ಹೊತ್ತಿಸಿದ ಬೆಂಕಿಯನ್ನು ನೆಗೆದು ದಾಟಿಸುವುದು ಉಂಟು(ಕಿಚ್ಚು ಹಾಯಿಸುವುದು).

  ಖಗೋಳ ಶಾಸ್ತ್ರದ ಪ್ರಕಾರ ಒಂದು ವಿವರಣೆ:


  ಸಂಕ್ರಾಂತಿ ಹಬ್ಬದಂದು ಉತ್ತರಾಯಣ ಪ್ರಾರಂಭವಗುತ್ತದೆ, ಖಗೋಳ ಶಾಸ್ತ್ರದ ಪ್ರಕಾರ ಸೂರ್ಯೋದಯ ಪೂರ್ವದಲ್ಲಿ ಮತ್ತು ಸೂರ್ಯಾಸ್ತ ಪಶ್ಚಿಮದಲ್ಲಿ ಎಂದು ಹೇಳೂವುದಾದರೂ, ಕರಾರುವಕ್ಕಾಗಿ ಪೂರ್ವದಲ್ಲೇ ಸೂರ್ಯೋದಯ ಮತ್ತು ಪಶ್ಚಿಮದ ರಲ್ಲೇ ಸೂರ್ಯಾಸ್ತವಾಗದು. ವರ್ಷದಲ್ಲಿ ಎರಡೇ ದಿನಗಳು ಅಂದರೆ ಸಂಕ್ರಾಂತಿಯ ದಿನವಾಗುವುದು ವಿಶೇಷವಾಗಿದೆ.
  ಕನ್ಯಾಕುಮಾರಿ. ಎಮ್
  ಪತ್ರಿಕೋದ್ಯಮ ವಿದ್ಯಾರ್ಥಿನಿ
  ಮಾನಸ ಗಂಗೋತ್ರಿ ಮೈಸೂರು

  NO COMMENTS

  LEAVE A REPLY