ಬೆಂಗಳೂರು(ಜ.14.2018): ಕನ್ನಡಿಗರು ಹರಾಮಿಗಳು ಎಂದು ಪದ ಬಳಸಿದ್ದ ಗೋವಾ ನೀರಾವರಿ ಸಚಿವ ವಿನೋದ್ ಪಾಲ್ಯೇಕರ್ ವಿರುದ್ದ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಗೋವಾ ಸಚಿವರ ಹೇಳಿಕೆ ವಿರುದ್ದ ಗರಂ ಆದ ಸಿಎಂ ಸಿದ್ದರಾಮಯ್ಯ, ಕನ್ನಡಿಗರ ಬಗ್ಗೆ ಹರಾಮಿ ಎಂಬ ಪದ ಬಳಕೆ ಗಮನಿಸಿದ್ದೇನೆ. ಗೋವಾ ಸಂಪುಟ ಸಚಿವರ ಹೇಳಿಕೆ ಖಂಡನೀಯ. ಮಹದಾಯಿ ನೀರನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಮಹದಾಯಿ ಯೋಜನೆ ಸಂಬಂಧ ರಾಜ್ಯದ ಸ್ಥಳ ಪರಿಶೀಲನೆಗೆ ಬಂದಿದ್ದ ವೇಳೆ ಗೋವಾ ಸಚಿವ ವಿನೋದ್ ಪಾಲೇಕರ್, ಕನ್ನಡಿಗರು ಹರಾಮ್ಕೋರರು ಅವರು ಏನನ್ನಾದರೂ ಮಾಡಬಹುದು. ಅದಕ್ಕಾಗಿ ನಾನು ಭದ್ರತೆಯೊಂದಿಗೆ ಬಂದಿದ್ದೇನೆ ಎಂದು ಹೇಳಿಕೆ ನೀಡಿದ್ದರು.