ಕನ್ನಡಿಗರು ಹರಾಮಿಗಳು:ಗೋವಾ ಸಚಿವ ವಿನೋದ್ ಪಾಲ್ಯೇಕರ್ ಉದ್ದಟತನ ಹೇಳಿಕೆ

ಕನ್ನಡಿಗರು ಹರಾಮಿಗಳು:ಗೋವಾ ಸಚಿವ ವಿನೋದ್ ಪಾಲ್ಯೇಕರ್ ಉದ್ದಟತನ ಹೇಳಿಕೆ

171
0
SHARE

ಬೆಳಗಾವಿ(ಜ.14.2018):ಕನ್ನಡಿಗರು ಹರಾಮಿಗಳು ಎಂದು ಗೋವಾ ನೀರಾವರಿ ಸಚಿವ ವಿನೋದ್ ಪಾಲ್ಯೇಕರ್ ಉದ್ದಟತನ  ಹೇಳಿಕೆ ನೀಡಿದ್ದು, ರಾಜ್ಯದ ಜನರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹದಾಯಿ ಯೋಜನೆ ಸಂಬಂಧ ರಾಜ್ಯದ ಸ್ಥಳ ಪರಿಶೀಲನೆಗೆ ಬಂದಿದ್ದ  ವೇಳೆ ಗೋವಾ ಸಚಿವ  ವಿನೋದ್ ಪಾಲ್ಯೇಕರ್  ಈ ರೀತಿ ಕನ್ನಡಿಗರ ಬಗ್ಗೆ ಅಪಮಾನಕಾರಿ ಹೇಳಿಕೆ ನೀಡಿದ್ದಾರೆ. ಕನ್ನಡಿಗರು ಹರಾಮ್‍ಕೋರರು ಅವರು ಏನನ್ನಾದರೂ ಮಾಡಬಹುದು. ಅದಕ್ಕಾಗಿ ನಾನು ಭದ್ರತೆಯೊಂದಿಗೆ ಬಂದಿದ್ದೇನೆ ಎಂದು  ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಪಾಲೇಕರ್ ಹೇಳಿಕೆಗೆ ರಾಜ್ಯದ ಕನ್ನಡಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಕಾಂಗ್ರೆಸ್ ನಾಯಕರೂ ಸಹ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹಾಗೂ  ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನಾಟಕವಾಡಿದ್ದಾರೆ. ಈಗ ರಾಜ್ಯಕ್ಕೆ ಬಂದಿರುವ ಪಾಲ್ಯೇಕರ್ ನಾಡಿನ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

NO COMMENTS

LEAVE A REPLY