ಮೈಸೂರಿನ ಇಂದಿರಾ ಕ್ಯಾಂಟಿನ್ ನಲ್ಲಿ ತಿಂಡಿಗೆ ಅಭಾವ: ಸಿಎಂ ವಿರುದ್ಧ ಜನರ ಆಕ್ರೋಶ

ಮೈಸೂರಿನ ಇಂದಿರಾ ಕ್ಯಾಂಟಿನ್ ನಲ್ಲಿ ತಿಂಡಿಗೆ ಅಭಾವ: ಸಿಎಂ ವಿರುದ್ಧ ಜನರ ಆಕ್ರೋಶ

222
0
SHARE

ಮೈಸೂರು(ಜ.13.2018):ನಿನ್ನೆಯಷ್ಟೆ ಮೈಸೂರಿನಲ್ಲಿ ಉದ್ಘಾಟನೆಯಾಗಿದ್ದ ಇಂದಿರಾ ಕ್ಯಾಂಟಿನ್ ನಲ್ಲಿ ಎರಡನೇ ದಿನವೇ ತಿಂಡಿಗೆ ಅಭಾವ ಉಂಟಾಗಿದೆ.

ಹೌದು ನಿನ್ನೆಯಷ್ಟೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಇಂದಿರಾ ಕ್ಯಾಂಟಿನ್ ಗೆ ಚಾಲನೆ ನೀಡಿದ್ದರು. ಬಳಿಕ ಕ್ಯಾಂಟಿನ್ ಸಾರ್ವಜನಿಕರ ಸೇವೆಗೆ ಲಭ್ಯವಾಗಿತ್ತು. ಆದರೆ ಇಂದು ಬೆಳಿಗ್ಗೆ 7.30ಕ್ಕೆ  ಅರಮನೆ ಸನಿಹದ ಕಾಡಾ ಕಚೇರಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ ಖಾಲಿಯಾಗಿದೆ.

ಇದರಿಂದ ಆಕ್ರೋಶಗೊಂಡ ಕೆಲಸಕ್ಕೆ ತೆರಳುವ ಕೂಲಿ ಕಾರ್ಮಿಕರು, ಸಾರ್ವಜನಿಕರು ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ, ಹೊಟ್ಟೆ ಹೊಡೆದುಕೊಂಡು ಹಸಿವು ಸ್ವಾಮಿ ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ನಿನ್ನೆಯಷ್ಟೆ ಸಿಎಂ ಸಿದ್ದರಾಮಯ್ಯ ಇಂದಿರಾ ಕ್ಯಾಂಟಿನ್ ಉದ್ಘಾಟನೆ ಮಾಡಿದ್ದರು.  ಇದರಿಂದ ಕ್ಯಾಂಟೀನ್ ನ ಮುಂಭಾಗವೇ ಜನರು ಅಸಮಾಧಾನ ಹೊರಹಾಕಿದ್ದು, ಇದೆಲ್ಲಾ ಕೇವಲ ಓಟಿಗಾಗಿ ಮಾಡುತ್ತಿರುವ ಗಿಮಿಕ್. ಚುನಾವಣೆ ಮುಗಿದ ಬಳಿಕ ಇಂದಿರಾ ಕ್ಯಾಂಟೀನ್ ಬಂದ್ ಆಗಲಿವೆ. ನಮ್ಮ ಹಸಿವು ನಿಮಗೆ ಗೊತ್ತಾಗುವುದಿಲ್ಲ ಸ್ವಾಮಿ  ಎಂದು ಅಲ್ಲಿ ನೆರೆದಿದ್ದ ನೂರಾರು ಜನರು ಕಿಡಿಕಾರಿದರು.

ಈ ವಿಚಾರ ತಿಳಿದು ಘಟನಾ ಸ್ಥಳಕ್ಕಾಗಮಿಸಿದ ಕೆ.ಆರ್.ಠಾಣೆ ಪೊಲೀಸರು ಅಲ್ಲಿ ನೆರೆದಿದ್ದ  ಎಲ್ಲರನ್ನೂ ಕಾಡಾ ಕಚೇರಿ ಆವರಣದಿಂದ ಹೊರಗೆ ಕಳುಹಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

NO COMMENTS

LEAVE A REPLY