ಪ್ರಧಾನಿ ಮೋದಿ ವಿಶ್ವದ ಮೂರನೇ ಟಾಪ್‌ ಲೀಡರ್‌..

ಪ್ರಧಾನಿ ಮೋದಿ ವಿಶ್ವದ ಮೂರನೇ ಟಾಪ್‌ ಲೀಡರ್‌..

213
0
SHARE

ಹೊಸದಿಲ್ಲಿ(ಜ.13.2018): ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತಿ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಚೀನಾ, ಅಮೆರಿಕಾ ಮತ್ತು ರಷ್ಯಾ ಅಧ್ಯಕ್ಷ ರನ್ನು ಹಿಂದಿಕ್ಕಿದ್ದು, ಮೂರನೇ ಸ್ಥಾನ ಪಡೆದಿದ್ದಾರೆ.

‘ಗಲ್ಲಪ್‌ ಇಂರ್ಟ ನ್ಯಾಷನಲ್‌’ 50 ದೇಶಗಳಲ್ಲಿ ನಡೆಸಿದ ‘ಒಪೀನಿಯನ್‌ ಆಫ್‌ ವಲ್ಡ…ರ್‍ ಲೀಡರ್ಸ್‌’ ವಾರ್ಷಿಕ ಸಮೀಕ್ಷೆಯಲ್ಲಿ ಜರ್ಮನಿ ಚಾನ್ಸಲರ್‌ ಆಂಜೆಲಾ ಮೆರ್ಕೆಲ್‌ ಮತ್ತು ಫ್ರೆಂಚ್‌ ಅಧ್ಯಕ್ಷ ಇಮ್ಯಾನ್ಯುಲ್‌ ಮ್ಯಾಕ್ರನ್‌ ಕ್ರಮವಾಗಿ ಮೊದಲನೇ ಮತ್ತು ಎರಡನೇ ಸ್ಥಾನದಲ್ಲಿದ್ದಾರೆ. ಮೋದಿ ವಿಶ್ವದ ಮೂರನೇ ಟಾಪ್‌ ಲೀಡರ್‌ ಆಗಿ ಹೊರಹೊಮ್ಮಿದ್ದಾರೆ.

ವಿಶೇಷವೆಂದರೆ ಜಗತ್ತಿನ ಪ್ರಬಲ ರಾಷ್ಟ್ರಗಳಾದ ಅಮೆರಿಕಾ, ಚೀನಾ, ರಷ್ಯಾ ಅಧ್ಯಕ್ಷ ರನ್ನೂ ಮೋದಿ ಹಿಂದಿಕ್ಕಿದ್ದಾರೆ. ಪ್ರಧಾನಿ ಮೋದಿಗಿಂತ ನಂತರದ ಅಂದರೆ ನಾಲ್ಕನೇ ಸ್ಥಾನ ಬ್ರಿಟನ್‌ ಪ್ರಧಾನಿ ಥೆರೆಸಾ ಮೇ ಅವರದ್ದಾಗಿದೆ.ಪಟ್ಟಿಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ 6ನೇ ಸ್ಥಾನ ಪಡೆದರೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ… ಟ್ರಂಪ್‌ ಗೆ 10ನೇ ಸ್ಥಾನದಲ್ಲಿದ್ದಾರೆ.

NO COMMENTS

LEAVE A REPLY