ಮೈಸೂರಿನ ಪಾಲಿಕೆ ಸದಸ್ಯನಿಂದ ‘ನೋ ಜಾಬ್ ನೋ ವೋಟ್’ ಪ್ರತಿಭಟನಾಕಾರನ ಮೇಲೆ ಹಲ್ಲೆ…

ಮೈಸೂರಿನ ಪಾಲಿಕೆ ಸದಸ್ಯನಿಂದ ‘ನೋ ಜಾಬ್ ನೋ ವೋಟ್’ ಪ್ರತಿಭಟನಾಕಾರನ ಮೇಲೆ ಹಲ್ಲೆ…

180
0
SHARE

ಮೈಸೂರು(ಜ.11.2018): ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಬಳಸಿಕೊಂಡು ನೋ ಜಾಬ್ ನೋ ವೋಟ್ ಅಭಿಯಾನದ ಸಭೆ ನಡೆಸುತ್ತಿದ್ದ ಸಂಘಟನೆ ಸದಸ್ಯರ ಮೇಲೆ ಪಾಲಿಕೆ ಸದಸ್ಯ ಪ್ರಶಾಂತ್ ಗೌಡ ಮತ್ತು ಬೆಂಬಲಿಗರು ಹಲ್ಲೆ ನಡೆಸಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ್ದಾರೆ.

ನಗರದ ನಾರಾಯಣ ಶಾಸ್ತ್ರೀ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಸಭೆ ನಡೆಸುತ್ತಿದ್ದ ವೇಳೆ ಏಕಾಏಕಿ ಬಂದು, ಸಂಘಟನೆಯ ರಾಷ್ಟ್ರೀಯ ಸಂಚಾಲಕ ಡಾ.ಜೇಡರ್ ಸೇರಿದಂತೆ ನಾಲ್ವರ ಮೇಲೆ ಹಲ್ಲೆ ನಡೆದಿದ್ದಾರೆ ಎಂದು ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ರೀತಿ ಪಾಲಿಕೆ ಸದಸ್ಯ ಪ್ರಶಾಂತ್ ಗೌಡ ಕೂಡ ದೂರು ನೀಡಿದ್ದು, ಉದ್ಯಾನದಲ್ಲಿ ಸಂಬಂಧ ಇಲಾಖೆ ಮತ್ತು ಪೊಲೀಸರ ಅನುಮತಿ ಪಡೆಯದೇ ಸಭೆ ನಡೆಸುತ್ತಿದ್ದು, ಈ ಬಗ್ಗೆ ಪ್ರಶ್ನಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

NO COMMENTS

LEAVE A REPLY