ಸಿಎಂ ಮಕ್ಕಳ ಭಾಗ್ಯವೊಂದನ್ನು ಬಿಟ್ಟು ಇನ್ನೆಲ್ಲಾ ಭಾಗ್ಯ ನೀಡಿದ್ದಾರೆ: ಅಡಗೂರು ವಿಶ್ವನಾಥ್

ಸಿಎಂ ಮಕ್ಕಳ ಭಾಗ್ಯವೊಂದನ್ನು ಬಿಟ್ಟು ಇನ್ನೆಲ್ಲಾ ಭಾಗ್ಯ ನೀಡಿದ್ದಾರೆ: ಅಡಗೂರು ವಿಶ್ವನಾಥ್

205
0
SHARE

ಮೈಸೂರು(ಜ.10.2018):ಸಿಎಂ ಸಿದ್ದು ಮಕ್ಕಳ ಭಾಗ್ಯವೊಂದನ್ನು ಬಿಟ್ಟು ಮಿಕ್ಕೆಲ್ಲಾ ಭಾಗ್ಯವನ್ನು ದಯಪಾಲಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಅಡಗೂರು ವಿಶ್ವನಾಥ್ ಕಿಡಿಕಾರಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನವಕರ್ನಾಟಕ ಯಾತ್ರೆ ನೆಪದಲ್ಲಿ ಸರ್ಕಾರದ ಖರ್ಚಿನಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ. ಇಂತಹವರಿಗೆ ಮತ ಹಾಕಿ ಇಂಥವರನ್ನು ಸೋಲಿಸಿ ಎಂದು ಅಧಿಕಾರದದರ್ಪದೊಂದಿಗೆ ಸರ್ಕಾರಿ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಎಲ್ಲಿದೆ? ಎಲ್ಲ ರೀತಿಯಲ್ಲೂ ದುಂದು ವೆಚ್ಚ ನಡೆಯುತ್ತಿದ್ದು ಸರ್ಕಾರ ದಿವಾಳಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಮಗು ಭಾಗ್ಯ ಒಂದು ಬಿಟ್ಟರೆ ಉಳಿದಂತೆ ಎಲ್ಲ ಭಾಗ್ಯಗಳನ್ನು ನೀಡಿದ್ದಾರೆ ಎಂದು ಹಾಸ್ಯಾಸ್ಪದವಾಗಿ ಮಾತನಾಡಿದ ಅವರು, ಹಿಂದಿನ ಸರ್ಕಾರಗಳ ಯೋಜನೆಗಳಿಗೆ ಭಾಗ್ಯ ಸೇರಿಸಿ ತಮ್ಮ ಯೋಜನೆಗಳೆಂದು ಹೇಳುತ್ತಿದ್ದಾರೆ, ಹೊರತು ಈ ನಾಲ್ಕು ವರ್ಷದ ಆಡಳಿತದಲ್ಲಿ ರಾಜ್ಯಕ್ಕೆ ನೀಡಿದ ಸ್ವಂತ ಯೋಜನೆ ಯಾವುದೆಂದು ಜನತೆ ತಿಳಿಸಿ ಎಂದು ಸವಾಲೆಸೆದರು.

NO COMMENTS

LEAVE A REPLY