ಬಿಜೆಪಿ,ಆರ್ ಎಸ್ ಎಸ್ ,ಬಜರಂಗದಳದವರೇ ಉಗ್ರಗಾಮಿಗಳು:ಸಿ ಎಂ ಸಿದ್ದರಾಮಯ್ಯ

ಬಿಜೆಪಿ,ಆರ್ ಎಸ್ ಎಸ್ ,ಬಜರಂಗದಳದವರೇ ಉಗ್ರಗಾಮಿಗಳು:ಸಿ ಎಂ ಸಿದ್ದರಾಮಯ್ಯ

182
0
SHARE

ಚಾಮರಾಜನಗರ(ಜ.10.2018):ಬಿಜೆಪಿ,ಆರ್ ಎಸ್ ಎಸ್ ಹಾಗೂ ಬಜರಂಗದಳದವರೇ ಉಗ್ರಗಾಮಿಗಳು. ಬಿಜೆಪಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಚಾಮರಾಜನಗರ ಜಿಲ್ಲೆ ನಾಗವಳ್ಳಿ ಗ್ರಾಮದಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪಿಎಫ್ ಐ ಆಗಲಿ, ಆರ್ ಎಸ್ ಎಸ್ ಆಗಲಿ ಶಾಂತಿ ಕದಡುವ ಯಾವುದೇ ಸಂಘಟನೆಯಾಗಲಿ ಕ್ರಮ ಕೈಗೊಳ್ಳಲಾಗುತ್ತದೆ. ರುದ್ರೇಶ ಹತ್ಯೆ ಪ್ರಕರಣದಲ್ಲಿ ಪಿಎಫ್ ಐ ನಂಟು ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳಿಲ್ಲ. ಈ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದರು.

ಇದಕ್ಕೂ ಮುಂಚೆ ಮಡಿಕೇರಿ ಹೆಲಿಪ್ಯಾಡ್ ನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಮಿತ್ ಶಾ ಅವರ 23 ಸೂತ್ರದ ವಿಚಾರ, ಅವರ ಆಟ ಕರ್ನಾಟಕದಲ್ಲಿ ನಡೆಯುದಿಲ್ಲ. ಇದು ಕರ್ನಾಟಕ, ಯುಪಿ ಅಲ್ಲ ಎಂಬುದನ್ನು ಶಾ ತಿಳಿಯಬೇಕು. ಯೋಗಿ ಆದಿತ್ಯನಾಥ್ ಅವರಿಗೆ ನಾನು ಮಹತ್ವ ನೀಡುವುದಿಲ್ಲ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದೇನೆ ಅಷ್ಟೇ ಎಂದು ಟಾಂಗ್ ನೀಡಿದರು.

NO COMMENTS

LEAVE A REPLY