ಕುಕ್ಕರಹಳ್ಳಿ ಕೆರೆಯಲ್ಲಿ ಪ್ರಾದೇಶಿಕ ವಿಜ್ಣಾನ ಕೇಂದ್ರ ತೆರವುಗೊಳಿಸಲು ಗಂಧದಗುಡಿ ಫೌಂಡೇಶನ್ ಮನವಿ…

ಕುಕ್ಕರಹಳ್ಳಿ ಕೆರೆಯಲ್ಲಿ ಪ್ರಾದೇಶಿಕ ವಿಜ್ಣಾನ ಕೇಂದ್ರ ತೆರವುಗೊಳಿಸಲು ಗಂಧದಗುಡಿ ಫೌಂಡೇಶನ್ ಮನವಿ…

398
0
SHARE

ಮೈಸೂರು (ಜ.10.2018):ನಗರದ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ನಿರ್ಮಿಸಲು ಹೊರಟಿರುವ, ಪ್ರಾದೇಶಿಕ ವಿಜ್ಣಾನ ಕೇಂದ್ರವನ್ನು ಸ್ಥಳಾಂತರ ಮಾಡಬೇಕೆಂದು ಗಂಧದಗುಡಿ ಫೌಂಡೇಶನ್ ಮನವಿ ಮಾಡಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಯುಕ್ತಶ್ರಯದಲ್ಲಿ ಮಂಜೂರಾಗಿದ್ದ ಮಹತ್ವಾಕಾಂಕ್ಷೆಯ ಯೋಜನೆ ಪ್ರಾದೇಶಿಕ ವಿಜ್ಣಾನ ಕೇಂದ್ರವನ್ನು ಮೈಸೂರುನ ಹೃದಯ ಭಾಗವಾದ ಕುಕ್ಕರಹಳ್ಳಿ ಕೆರೆ ಆವರಣದ ಏಳು ಎಕ್ಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತದೆ.

ಕುಕ್ಕರಹಳ್ಳಿ ಕೆರೆಯಲ್ಲಿ ಹಲವು ವೈವಿಧ್ಯಮಯ ಪಕ್ಷಿಗಳು ಹಾಗೂ ಸಸ್ಯವರ್ಗ ಇರುವ ಹಿನ್ನೆಲೆಯಲ್ಲಿ ಅಪಾಯ ಉಂಟಾಗಬಹುದು ಎಂದು ಮುಂಜಾಗೃತಿಕ್ರಮ ವಹಿಸಿ ಯೋಜನೆಯನ್ನು ಸ್ಥಗಿತಗೊಳಿಸಬೇಕೆಂದು ಈ ಮೂಲಕ ಐಟಿ.ಬಿಟಿ ಮತ್ತು ವಿಜ್ಣಾನ ಕೇಂದ್ರದ ಕಾರ್ಯದರ್ಶಿಯಾದ ಗೌರವ್ ಗುಪ್ತ ರವರಿಗೆ ಮನವಿ ಪತ್ರ ಬರೆಯಲಾಗಿದೆ ಎಂದು ಗಂಧದಗುಡಿ ಫೌಂಡೇಶನ್ ಅಧ್ಯಕ್ಷರಾದ ಮೋಹನ್ ತಿಳಿಸಿದ್ದಾರೆ.

ಈಗಾಗಲೇ ಹಲವು ವರ್ಷಗಳಿಂದ ಕಲುಷಿತ ನೀರು, ಒಳಚರಂಡಿ ನೀರಿನಿಂದ ಕೆರೆ ಮಲೀನಗೊಂಡಿದ್ದು, ಈ ನಂತರದಲ್ಲಿ ಪ್ರಾದೇಶಿಕ ವಿಜ್ಣಾನ ಕೇಂದ್ರವನ್ನು ಸ್ಥಾಪಿಸಿದರೆ, ಅಲ್ಲಿನ ರಾಸಾಯನಿಕ ಅಂಶಗಳು ಸೇರಿದರೆ ನೀರು ಮತ್ತಷ್ಟು ಮಲೀನವಾಗಿ ಜಲಚರಗಳಿಗೆ ಖಂಟಕವಾಗುತ್ತದೆ ಎಂದು ಮೋಹನ್ , ನಂದೀಶ್ ಹಾಗೂ ವಿಕಾಸ್ ರವರು  ವಿಹಾರಕ್ಕೆ ಬರುವ ಹಿರಿಯರೊಂದಿಗೆ ಸಮಾಲೋಚನೆ ನಡೆಸಿದರು. 

NO COMMENTS

LEAVE A REPLY