ರಾಜ್ಯದ ಬಿಪಿಎಲ್‌ ಕುಟುಂಬಗಳಿಗೆ ಗುಡ್ ನ್ಯೂಸ್..!

ರಾಜ್ಯದ ಬಿಪಿಎಲ್‌ ಕುಟುಂಬಗಳಿಗೆ ಗುಡ್ ನ್ಯೂಸ್..!

813
0
SHARE

ಬೆಂಗಳೂರು(ಜ.9.2018):ರಾಜ್ಯಾದ್ಯಂತ ಬಿಪಿಎಲ್ ಕುಟುಂಬಗಳಿಗೂ ಕುರಿ, ಮೇಕೆ, ಕೋಳಿ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಪಶುಸಂಗೋಪನೆ ಸಚಿವ ಎ.ಮಂಜು ತಿಳಿಸಿದ್ದಾರೆ. ಅವರು ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಎ.ಮಂಜು ಈ ವಿಷಯ ತಿಳಿಸಿದ್ದಾರೆ. ಸದ್ಯಕ್ಕೆ ಪಶುಭಾಗ್ಯ ಯೋಜನೆ ಸೇರಿದಂತೆ ಕೆಲ ಯೋಜನೆಗಳಡಿ ಕೆಲವರಿಗೆ ಈ ಸೌಲಭ್ಯ ದೊರೆಯುತ್ತಿದ್ದರೂ ಬಿಪಿಎಲ್ ಕುಟುಂಬಗಳಿಗೆ ಇದು ವಿಸ್ತರಣೆಯಾಗಬೇಕು ಎಂದು ಹೇಳಿದರು.

ಇದೇ ವೇಳೆ ಅವರು ಮಾತನಾಡುತ್ತ ರಾಜ್ಯದಲ್ಲಿ ಮಾಂಸದ ಉತ್ಪಾದನೆಯ ಪ್ರಮಾಣ ಕಡಿಮೆ ಇದ್ದು, ಈ ಹಿನ್ನೆಲೆಯಲ್ಲಿ ಮಾಂಸದ ಉತ್ಪಾದನೆಯನ್ನು ಹೆಚ್ಚಿಸಲು ಕುರಿ, ಮೇಕೆ, ಕೋಳಿಗಳನ್ನು ಒದಗಿಸಲು ಸರ್ಕಾರ ಮುಂದಾಗಿದೆ. ಮಾಂಸದ ಉತ್ಪಾದನೆಯನ್ನು ಹೆಚ್ಚಿಸಲು ಮುಂದಾಗಲೇಬೇಕಾದ ಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಕುರಿ, ಮೇಕೆ, ಕೋಳಿ ಸಾಕಲು ಬಯಸುವ ಬಿಪಿಎಲ್ ಕುಟುಂಬಗಳಿಗೆ ಅವನ್ನು ಒದಗಿಸುವಂತೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಒಬ್ಬ ವ್ಯಕ್ತಿ ವಾರ್ಷಿಕ 11 ಕೆಜಿಗಳಷ್ಟು ಮಾಂಸವನ್ನು ಸೇವಿಸುತ್ತಾರೆ. ಆದರೆ ರಾಜ್ಯದಲ್ಲಿ ಮಾಂಸದ ಉತ್ಪಾದನೆಯ ಪ್ರಮಾಣ ಕೇವಲ 3 ಕೆ.ಜಿ.ಯಷ್ಟಿದೆ. ಹೀಗಾಗಿ ಮನುಷ್ಯನ ಬೇಡಿಕೆಯ ಪ್ರಮಾಣಕ್ಕಿಂತಲೂ ತಲಾ 8 ಕೆಜಿಗಳಷ್ಟು ಮಾಂಸದ ಕೊರತೆ ಇದೆ. ಹೀಗಾಗಿ ಹೆಚ್ಚುವರಿ ಅಗತ್ಯವನ್ನು ಪೂರೈಸಲು ಹೊರ ರಾಜ್ಯಗಳಿಂದ ಕುರಿ, ಮೇಕೆ, ಕೋಳಿಗಳನ್ನು ಆಮದು ಮಾಡಿಕೊಳ್ಳಬೇಕಾದ ಸ್ಥಿತಿಯಿದೆ.

ಇದನ್ನು ತಪ್ಪಿಸಲು ರಾಜ್ಯದಲ್ಲಿ ಕುರಿ, ಮೇಕೆ, ಕೋಳಿಗಳನ್ನು ಸಾಕಲು ಬಯಸುವ ಬಿಪಿಎಲ್ ಕುಟುಂಬಗಳಿಗೆ ಒದಗಿಸಬೇಕು ಎಂಬುದು ಸರ್ಕಾರದ ಯೋಚನೆ. ಎರಡು ಕುರಿ, ಮೇಕೆ ಮತ್ತು ಹಲವು ಕೋಳಿಗಳನ್ನು ಒದಗಿಸಿದರೆ ಅವನ್ನು ಪಾಲನೆ, ಪೋಷಣೆ ಮಾಡುವುದರ ಮುಖಾಂತರ ವರ್ಷಕ್ಕೆ 35 ರಿಂದ 40 ಸಾವಿರ ರೂ.ಗಳಷ್ಟು ಆದಾಯ ಮಾಡಿಕೊಳ್ಳಬಹುದು ಎಂದು ವಿವರಿಸಿದರು.

NO COMMENTS

LEAVE A REPLY