ಯೋಗಿ ಸರ್ಕಾರದ ವಿರುದ್ಧ ಪ್ರಕಾಶ್ ರೈ ಚಾಟಿ

ಯೋಗಿ ಸರ್ಕಾರದ ವಿರುದ್ಧ ಪ್ರಕಾಶ್ ರೈ ಚಾಟಿ

251
0
SHARE

ಲಖನೌ(ಜ.09.2018):ಹಜ್ ಭವನಕ್ಕೆ ಬಳಿಯಲಾಗಿದ್ದ ಕೇಸರಿ ಬಣ್ಣದ ವಿಚಾರವನ್ನು ಪ್ರಸ್ತಾಪಿಸಿರುವ ಬಹುಭಾಷಾ ನಟ ಪ್ರಕಾಶ್ ರೈ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಪುನಃ ಟೀಕಾಪ್ರಹಾರ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರೈ, ‘ಗೋಡೆಗಳ ಬಣ್ಣ ಬದಲಾವಣೆ ಮಾಡುವುದೇ ವಿಕಾಸವೇ? ಎಂದು ಪ್ರಶ್ನಿಸಿದ್ದಾರೆ.
ಇದರ ಜತೆಗೆ ರೈತರು ಬೆಲೆ ಕುಸಿತದಿಂದ ಆಲೂಗಡ್ಡೆಯನ್ನು ನಿಮ್ಮ ಮನೆ ಎದುರು ಸುರಿಯುತ್ತಿದ್ದಾರೆ. ಆದಾಗ್ಯೂ ನಿಮ್ಮ ಕೃಷಿ ಸಚಿವ, ರೈತರು ಬೆಳೆದ ಆಲೂಗಡ್ಡೆ ಉತ್ತಮ ಗುಣಮಟ್ಟದಲ್ಲ ಎನ್ನುತ್ತಿದ್ದಾರೆ. ರೈತರ ಕಷ್ಟ ಅರ್ಥೈಸಿಕೊಳ್ಳುವುದು ಹೀಗೆಯೇ? ಎಂದು ರೈ ಟೀಕಿಸಿದ್ದಾರೆ.

NO COMMENTS

LEAVE A REPLY