ದಲಿತರ ಮನೆಯಲ್ಲಿ ಮುದ್ದೆ ಮುರಿದ ಪರಂ:ಇದು ಕೆಪಿಸಿಸಿ ಅಧ್ಯಕ್ಷರ ಗ್ರಾಮವಾಸ್ತವ್ಯ

ದಲಿತರ ಮನೆಯಲ್ಲಿ ಮುದ್ದೆ ಮುರಿದ ಪರಂ:ಇದು ಕೆಪಿಸಿಸಿ ಅಧ್ಯಕ್ಷರ ಗ್ರಾಮವಾಸ್ತವ್ಯ

246
0
SHARE

ತುಮಕೂರು(ಜ.9.2018):ಚುನಾವಣೆ ಆರಂಭವಾಗುತ್ತಿದ್ದಂತೆ ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳು ಹಾಗೂ ಜನತೆಯತ್ತ ಮುಖಮಾಡೋದು ಸಾಮಾನ್ಯವಾದ ಸಂಗತಿ. ಇದೀಗ ಈ ಸಾಲಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್​​ ಸೇರ್ಪಡೆಯಾಗಿದ್ದಾರೆ.

ಈಗಾಗಲೇ ತಮ್ಮ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಆರಂಭಿಸಿರುವ ಡಾ.ಜಿ.ಪರಮೇಶ್ವರ್​​ ಇದೇ ಮೊದಲ ಬಾರಿಗೆ ಗ್ರಾಮವಾಸ್ತವ್ಯ ಮಾಡಿ ದಲಿತರ ಸಮಸ್ಯೆಗಳನ್ನು ಆಲಿಸಿದರು. ನಿನ್ನೆ ತುಮಕೂರಿನ ಹಲವು ಸಭೆಗಳಲ್ಲಿ ಭಾಗವಹಿಸಿದ ಪರಮೇಶ್ವರ್​ ತುಮಕೂರು ಜಿಲ್ಲೆ ತುರುವೆಕರೆ ತಾಲೂಕಿನ ಕೊರಟಗೆರೆ ಮುಗ್ಗೇನಹಳ್ಳಿ ಗ್ರಾಮದ ಹನುಮಂತರಾಪ್ಪ ಎನ್ನುವವರ ಮನೆಯಲ್ಲಿ ವಾಸ್ತವ್ಯ ಹೂಡಿದರು.

ಈ ವೇಳೆ ಅವರನ್ನು ಗ್ರಾಮಸ್ಥರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ತಾವು ಸ್ಪರ್ಧಿಸುವ ಕೊರಟಗೆರೆ ಕ್ಷೇತ್ರದಲ್ಲಿ ಗ್ರಾಮವಾಸ್ತವ್ಯ ಮಾಡಿದ ಪರಮೇಶ್ವರ್, ಮನೆಯಲ್ಲೇ ತಯಾರಿಸಿದ ಸೊಪ್ಪಿನಸಾರು ಮತ್ತು ಮುದ್ದೆ ಸವಿದರು. ಅಲ್ಲದೇ ಮನೆಯ ಕೋಣೆಯಲ್ಲಿ ಕೆವಲ ಚಾಪೆಯಲ್ಲಿ ಮಲಗಿ ನಿದ್ರಿಸಿದರು. ಬೆಳಗ್ಗೆ ಎದ್ದು ಪೇಪರ್​ ಓದಿದ ಪರಮೇಶ್ವರ್ ಬಳಿಕ ಕಾಫಿ ಕುಡಿದ ಪರಮೇಶ್ವರ್​ ಬಳಿಕ ತುಮಕೂರು ಗ್ರಾಮಾಂತರ ಪ್ರದೇಶಕ್ಕೆ ವಿಸಿಟ್​​ ಮಾಡಿದರು.

ಒಟ್ಟಿನಲ್ಲಿ ಪರಮೇಶ್ವರ್​ ಕೂಡ ಕುಮಾರಸ್ವಾಮಿಯಂತೆ ಗ್ರಾಮವಾಸ್ತವ್ಯಕ್ಕೆ ಮುಂಧಾಗಿದ್ದು ಮಾತ್ರ ಅಚ್ಚರಿ ಸಂಗತಿ. ಗ್ರಾಮವಾಸ್ತವ್ಯದ ಬಳಿಕ ಮಾತನಾಡಿದ ಪರಮೇಶ್ವರ್ ಗ್ರಾಮವಾಸ್ತವ್ಯ ಚುನಾವಣಾ ಗಿಮಿಕ್​ ಅಲ್ಲ. ಇದು ಗಾಂಧಿ,ಇಂದಿರಾಗಾಂಧಿ ಕಾಲದಿಂದಲೂ ಇದೆ ಎಂದು ಪರಮೇಶ್ವರ್​ ಸ್ಮರಿಸಿಕೊಂಡರು.

NO COMMENTS

LEAVE A REPLY