ಯುವಕನನ್ನು ಬದುಕಿರುವಾಗಲೇ ಶವಗಾರದಲ್ಲಿಟ್ಟ ಕಿಮ್ಸ್​ ಆಸ್ಪತ್ರೆ ವೈದ್ಯರು

ಯುವಕನನ್ನು ಬದುಕಿರುವಾಗಲೇ ಶವಗಾರದಲ್ಲಿಟ್ಟ ಕಿಮ್ಸ್​ ಆಸ್ಪತ್ರೆ ವೈದ್ಯರು

212
0
SHARE

ಹುಬ್ಬಳ್ಳಿ(ಜ.8.2018):ಬದುಕಿದ್ದ ಯುವಕನನ್ನು ಸುಮಾರು ಏಳು ಗಂಟೆಗಳ ಕಾಲ ಶವಾಗಾರದಲ್ಲಿಟ್ಟು ವೈದ್ಯರು ಯಡವಟ್ಟು ಮಾಡಿದ ಘಟನೆ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ನಡೆದಿದೆ.

ಆನಂದ್​ ನಗರದ ನಿವಾಸಿ ಪ್ರವೀಣ್​ ಮೂಳೆ(23) ಎಂಬ ಯುವಕನಿಗೆ ನಿನ್ನೆ ಸಂಜೆ ಅಪಘಾತವಾಗಿರುತ್ತು. ತಕ್ಷಣ ಇವರನ್ನು ಸಂಬಧಿಕರು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಪ್ರವೀಣ್​ ಮರಣ ಹೊಂದಿದ್ದಾರೆಂದು ರಾತ್ರಿ 3 ಗಂಟೆಯ ವೇಳೆಗೆ ಅವರನ್ನು ಶವಾಗಾರಕ್ಕೆ ಸಾಗಿಸಲಾಗಿತ್ತು.

ಈ ನಡುವೆ ಇಂದು ಬೆಳಗ್ಗೆ 10 ಗಂಟೆಯ ವೇಳೆಗೆ ಮರಣೋತ್ತರ ಪರೀಕ್ಷೆ ಮಾಡಲು ವೈದ್ಯರು ತೆರಳಿದಾಗ ಪ್ರವೀಣ್​ ಇನ್ನೂ ಬದುಕಿದ್ದಾರೆ ಎಂದು ವಿಷಯ ತಿಳಿದು ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಕಿಮ್ಸ್​ನಿಂದ ಪ್ರವೀಣ್​ನನ್ನು ಸಂಬಧಿಕರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು 20 ನಿಮಿಷದ ಹಿಂದೆ ಯುವಕ ತೀರಿಕೊಂಡಿದ್ದಾಗಿ ಹೇಳಿದ್ದಾರೆ.

ಕಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದ ವಿರುದ್ದ ಮೃತ ಪ್ರವೀಣ್ ಮೂಳೆ ಕುಟುಂಬಸ್ಥರು ಕಿಮ್ಸ್​ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

NO COMMENTS

LEAVE A REPLY