ಜನವರಿ 12ರಂದು ಮೈಸೂರಿನ ಎಲ್ಲಾ ಇಂದಿರಾ ಕ್ಯಾಂಟಿನ್ ಗಳು ಲೋಕಾರ್ಪಣೆ

ಜನವರಿ 12ರಂದು ಮೈಸೂರಿನ ಎಲ್ಲಾ ಇಂದಿರಾ ಕ್ಯಾಂಟಿನ್ ಗಳು ಲೋಕಾರ್ಪಣೆ

282
0
SHARE

ಮೈಸೂರು(ಜ.8.2018):ಮೈಸೂರಿನಲ್ಲಿ ಜನವರಿ 12 ರಿಂದ ನಗರದ ಎಲ್ಲಾ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಯಾಗಲಿವೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ಕಾಡಾ ಕಚೇರಿಯ ಬಳಿ ನಿರ್ಮಾಣ ಗೊಂಡಿರುವ ಕ್ಯಾಂಟೀನ್ ಪರಿಶೀಲನೆ ನಡೆಸಿದ ಬಳಿಕ, ಈ ಕುರಿತು ಇಂದು ಮಾಹಿತಿ ನೀಡಿದ ಡಿಸಿ ರಂದೀಪ್, ಜ‌.12ರಂದು ನಗರದಲ್ಲಿ ನಿರ್ಮಾಣ ಗೊಂಡಿರುವ 11 ಕ್ಯಾಂಟೀನ್ ಗಳನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ. ಮೈಸೂರು ಜಿಲ್ಲೆಯಾದ್ಯಂತ ಒಟ್ಟು 17ಕ್ಯಾಂಟೀನ್ ಗಳಿದ್ದು ಉಳಿದ 6 ಕ್ಯಾಂಟೀನ್ ಗಳನ್ನು ಬೇರೆ ದಿನ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.

ಪ್ರತಿದಿನ ಮೂರು ವೇಳೆಗಳಲ್ಲಿ ಆಹಾರ ದೊರೆಯುಂತೆ ಕ್ರಮ ವಹಿಸಲಾಗುತ್ತದೆ. ಬೆಳಗ್ಗಿನ ತಿಂಡಿ 5ರೂಗಳಿಗೆ , ಮಧ್ಯಾಹ್ನ, ಮತ್ತು ರಾತ್ರಿಯ ವೇಳೆ ಊಟಕ್ಕೆ 10 ರೂಪಾಯಿ ನಿಗದಿ ಮಾಡಲಾಗಿದೆ ಎಂದರು. ಪ್ರತಿಯೊಂದು ಕ್ಯಾಂಟೀನ್ ಗೂಗಲ್ ಮ್ಯಾಪ್ ಸ್ಥಳ ತೋರಿಸುವಂತೆ ಅಭಿವೃದ್ಧಿ ಪಡಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

NO COMMENTS

LEAVE A REPLY