ಸ್ವಚ್ಛತೆಯ ಹಿಂದಿನ ಗುಟ್ಟು…

  355
  0
  SHARE

  ಸ್ವಚ್ಛತೆಯ ಹಿಂದಿನ ಗುಟ್ಟು…

  ಮೈಸೂರು ಎರಡು ಬಾರಿ ಸ್ವಚ್ಛ ನಗರಿ ಎಂದು ಮಾನ್ಯತೆ ಪಡೆದಿದೆ. ಇದರ ಹಿಂದೆ ಕೇವಲ ಮೇಯರ್ ಹಾಗೂ ಲಿಕೆ ಅಧಿಕಾರಿಗಳು ಶ್ರಮ ಅಷ್ಟೇ ಅಲ್ಲ, ಮೈಸೂರು ನಗರಪಾಲಿಕೆಯ ಪೌರಕಾರ್ಮಿಕರ ಪಾತ್ರ ಪ್ರಮುಖವಾಗಿದೆ. ಪ್ರತಿಯೊಬ್ಬ ಮೈಸೂರಿಗನು ನಮ್ಮ ಊರು ಸ್ವಚ್ಛನಗರಿ ಎಂದು ಬೀಗುವುದರ ಹಿಂದೆ ಈ ಮಹಾನುಭಾವರ ಶ್ರಮವಿದೆ. ಪ್ರತಿಯೊಂದು ಯಶಸ್ಸಿನ ಹಿಂದೆ ಒಂದು ಹೆಣ್ಣು ಇರುತ್ತಾಳೆ ಎಂಬುದು ಎಷ್ಟು ಸತ್ಯವೊ, ಮೈಸೂರು ಸ್ವಚ್ಛ ನಗರಿ ಎಂದು ಬಿರುದು ಪಡೆಯುವುದಕ್ಕೆ ನಮ್ಮ ಪೌರಕಾರ್ಮಿಕರಲ್ಲಿ ಮಹಿಳೆಯರ ಪರಿಶ್ರಮವಿದೆ ಎಂಬುದು ಅಷ್ಟೇ ಸತ್ಯ.

  ಆದರೆ ಇವರ ಶೋಚನೀಯ ಸ್ಥಿತಿ ಹೇಳ ತೀರದು. ಏಕೆಂದರೆ ಪ್ರತಿಯೊಬ್ಬರು ಕೂಡ ಬೆಳಗಾಗುವ ಮುಂಚೆ ಎದ್ದು ಅವರವರ ಕಾರ್ಯದಲ್ಲಿ ನಿರತರಾಗುತ್ತಾರೆ. ಇವರುಗಳು ಇಷ್ಟೇಲ್ಲಾ ಶ್ರಮವಹಿಸಿ ಕೆಲಸ ಮಾಡಿದರು ಸಿಗುವುದು ಬರಿ ಅವಮಾನಗಳು. ನಮ್ಮ ಜನತೆ ತಮ್ಮ ಮನೆಯಲ್ಲಿರುವ ಕಸದ ರಾಶಿ ಖಾಲಿಯಾಗಬೇಕು ಆದರೆ ನಮ್ಮ ಮನೆ, ಬೀದಿ, ತಾವು ಇರುವ ಪ್ರದೇಶವನ್ನು ಸ್ವಚ್ಛ ಮಾಡುವವರಿಗೆ ಗೌರವ ನೀಡುವ ಪ್ರವೃತ್ತಿ ಮಾತ್ರ ಬೆಳೆಸಿಕೊಂಡಿಲ್ಲ. ಇದರ ಜೊತೆ ಮಹಾನಗರ ಪಾಲಿಕೆ ಪ್ರತಿ ಮನೆ ಮನೆಗೆ ತಲಾ 2 ಕಸದ ಬುಟ್ಟಿಯನ್ನು ನೀಡಿದೆ, ಕಾರಣ ಒಂದು ಕಸದ ಬುಟ್ಟಿ ಒಣ ಕಸಕ್ಕಾಗಿ ಮತ್ತೊಂದು ಹಸಿ ಕಸಕ್ಕಾಗಿ ಎಂದು ಆದರೆ ನಮ್ಮ ಜನರು ಅದರಲ್ಲಿ ಕಸವನ್ನು ಹಾಕಿ ನೀಡುವ ಬದಲು ಅದರಲ್ಲಿ ತಮಗೆ ಬೇಕಾದ ಪರಿಕರಗಳನ್ನು ಇಟ್ಟುಕೊಂಡಿದ್ದಾರೆ, ಇದು ಎಷ್ಟು ಸರಿ, ಇದಿಷ್ಟು ಮನೆ ಮನೆಗಳಲ್ಲಿ ಕಸ ಸಂಗ್ರಹಿಸುವವರ ಕಥೆಯಾಗಿದೆ.

  ಇನ್ನು ನಗರದ ಪ್ರಮುಖ ಬೀದಿಗಳಲ್ಲಿ ಸ್ವಚ್ಛಗೊಳಿಸುವವರ ಪರಿಸ್ಥಿತಿ ಬಹಳ ಕಷ್ಟವಾಗಿದೆ ಈ ಪೌರ ಕಾರ್ಮಿಕರು ರಾತ್ರಿ 1 ಗಂಟೆಯಿಂದಲೆ ಕಾರ್ಯ ಆರಂಭವಗುತ್ತದೆ ಕಾರಣ ಹಗಲಿನ ಸಮಯದಲ್ಲಿ ವಾಹನ ದಟ್ಟಣೆಯಿಂದಾಗಿ ಸ್ವಚ್ಛಕಾರ್ಯ ಕಷ್ಟವಾಗುತ್ತದೆ ಎಂದು. ನಮ್ಮ ಪೌರಕಾರ್ಮಿಕರು ಅನಕ್ಷರಸ್ಥರಾಗಿದ್ದಾರೆ ಆದ್ಧರಿಂದ ಅವರಿಗೆ ಯಾವ ಸೌಲಭ್ಯ ದೊರೆಯುತ್ತದೆ ಎಂಬುದರ ಅರಿವೇ ಇಲ್ಲ. ಮನೆ ಮನೆಗೆ ಬಂದು ಕಸವನ್ನು ತೆಗೆದುಕೊಳ್ಳುವ ಕೆಲವು ಪೌರಕಾರ್ಮಿಕರು ಜನರು ನೀಡುವ ಊಟ, ಹಳೆಯ ಬಟ್ಟೆಗಳು, ಮತ್ತು ಸ್ವಲ್ಪ ಪ್ರಮಾಣದ ಹಣವನ್ನು ತೆಗೆದುಕೊಳ್ಳುವುದನ್ನು ನೋಡಿದರೆ ಬಹಳ ಬೇಸರ ಉಂಟಾಗುತ್ತದೆ. ಈ ಪರಿಸ್ಥಿತಿಗೆ ಕಾರಣ ಅವರ ಕಡು ಬಡತನ. ಆದ್ದರಿಂದ ಮಹಾನಗರ ಪಾಲಿಕೆ ನೇರವಾಗಿ ಸೌಲಭ್ಯಗಳು ಪೌರಕಾರ್ಮಿಕರಿಗೆ ದೊರೆಯುವಂತೆ ಮಾಡಿದರೆ ಇವರುಗಳು ಮಧ್ಯವರ್ತಿಗಳಿಂದ ಮೋಸ ಆಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ.
  ಕನ್ಯಕುಮಾರಿ
  ಪತ್ರಿಕೋದ್ಯಮ ವಿದ್ಯಾರ್ಥಿನಿ
  ಮಾನಸ ಗಂಗೋತ್ರಿ ಮೈಸೂರು

  NO COMMENTS

  LEAVE A REPLY