ಅಧಿಕೃತವಾಗಿ ಪಕ್ಷ ಸೇರ್ಪಡೆ ಘೋಷಿಸಿದ ಪ್ರೇಮಕುಮಾರಿ..

ಅಧಿಕೃತವಾಗಿ ಪಕ್ಷ ಸೇರ್ಪಡೆ ಘೋಷಿಸಿದ ಪ್ರೇಮಕುಮಾರಿ..

316
0
SHARE

ಮೈಸೂರು(ಜ,7,2018):ಇತ್ತೀಚೆಗಷ್ಟೆ ರಾಜಕೀಯಕ್ಕೆ ಬರುವುದಾಗಿ ತಿಳಿಸಿದ್ದ ರಾಮದಾಸ್ ಪ್ರೇಮ ಪ್ರಕರಣದ ಪ್ರೇಮ ಕುಮಾರಿ ಇದೀಗ ಇಂಡಿಯನ್ ನ್ಯೂ ಕಾಂಗ್ರೆಸ್ ಪಕ್ಷ (ಐ.ಎನ್.ಸಿ.ಪಿ.)ಕ್ಕೆ ಸೇರ್ಪಡೆ ಬಗ್ಗೆ ಅಧಿಕೃತ ವಾಗಿ ಘೋಷಿಸಿದ್ದಾರೆ.

ಮೈಸೂರಿನ‌ ಪತ್ರಕರ್ತರ ಭವನದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಯೂಬ್ ಖಾನ್ ಅವರು ಹೂಗುಚ್ಛ ನೀಡಿ ಪ್ರೇಮಕುಮಾರಿ ಅವರನ್ನು ಆಹ್ವಾನಿಸಿದರು.

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರೇಮ ಕುಮಾರಿ, ಇದು ರಾಜಕೀಯ ಪ್ರೇರಿತ ಅಥವಾ ಯಾರದೋ ಒತ್ತಾಸೆಗೆ ತೆಗೆದುಕೊಂಡ ನಿರ್ಣಯವಲ್ಲ. ನೊಂದವರು, ಬಡವರ ಸೇವೆ ಮಾಡಲು ಪಕ್ಷ ಸೇರುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಸಕ್ರಿಯವಾಗಿ ರಾಜಕೀಯದಲ್ಲಿರುತ್ತೇನೆ ಎಂದರು.

ನಾ‌ನು ಬಹಳ‌ ನೊಂದಿರುವ ಹೆಣ್ಣು ಮಗಳು. ನೊಂದವರ ಧ್ವನಿಯಾಗಬೇಕು. ಸರ್ಕಾರಗಳು ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನ ನನ್ನ ಪ್ರಕರಣದಲ್ಲೇ ಸಾಬೀತಾಗಿದೆ. ಹಾಗಾಗಿ ನೊಂದವರ ಪರ‌ ನಿಲ್ಲಬೇಕೆಂಬ ಸದುದ್ದೇಶದಿಂದ ರಾಜಕೀಯ ಪ್ರವೇಶ ಮಾಡಿದ್ದೇನೆ ವಿದ್ಯಾರ್ಥಿ ದೆಸೆಯಲ್ಲೇ ನನಗೆ ರಾಜಕೀಯ ಆಸಕ್ತಿ ಇದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನಲ್ಲಿ ಸ್ಪರ್ಧಿಸುತ್ತಿದ್ದೇನೆ. ಎಲ್ಲಿಂದ ಸ್ಪರ್ಧಿಸಬೇಕೆಂಬುದನ್ನ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಪ್ರೇಮ ಕುಮಾರಿ ತಿಳಿಸಿದರು.

NO COMMENTS

LEAVE A REPLY