ಕರಾವಳಿ ಗಲಭೆಗೆ ಮತ್ತೊಂದು ಬಲಿ

ಕರಾವಳಿ ಗಲಭೆಗೆ ಮತ್ತೊಂದು ಬಲಿ

188
0
SHARE

ಮಂಗಳೂರು(ಜ.07.2018):ಕರಾವಳಿ ಗಲಭೆಗೆ ಮತ್ತೊಂದು ಹತ್ಯೆಯಾಗಿದೆ. ದುಷ್ಕರ್ಮಿಗಳಿಂದ ತೀವ್ರವಾಗಿ ಹಲ್ಲೆಗೊಳಗಾದ ಬಷೀರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಜ.3ರಂದು ಬಜರಂಗದಳದ ಕಾರ್ಯಕರ್ತ ದೀಪಕ್ ರಾವ್ ಅವರನ್ನು ಹತ್ಯೆ ಮಾಡಲಾಗಿತ್ತು. ಅದೇ ದಿನದಂದು ತಮ್ಮ ಫಾಸ್ಟ್’ಫುಡ್ ಅಂಗಡಿಯಿಂದ ಕೆಲಸ ಮುಗಿಸಿ ರಾತ್ರಿ 11.30ರ ಸುಮಾರಿಗೆ ಮನೆಗೆ ತೆರಳುತ್ತಿದ್ದ ವ್ಯಾಪಾರಿ ಅಬ್ದುಲ್ ಬಷೀರ್(47) ಮೇಲೆ ಕೊಟ್ಟಾರ ಚೌಕಿಯಲ್ಲಿ 3 ಬೈಕ್’ನಲ್ಲಿ ಬಂದ 7 ಮಂದಿ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು.

ತೀವ್ರವಾಗಿ ಗಾಯಗೊಂಡ ಇವರನ್ನು ಸ್ಥಳೀಯರು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಿದ್ದರು. ನಾಲ್ಕು ದಿನ ಜೀವನ್ಮರಣ ಸ್ಥಿತಿಯಲ್ಲಿದ್ದ ಬಷೀರ್ ಕೊನೆಗೂ ಬದುಕಲಿಲ್ಲ. ಎ.ಜೆ. ಆಸ್ಪತ್ರೆಗೆ ಶಾಸಕ ಮೊಯ್ದಿನ್ ಬಾವ, ಕಮೀಷನರ್ ಟಿ.ಆರ್ ಸುರೇಶ್ ಭೇಟಿ ನೀಡಿದ್ದು, ಮಂಗಳೂರಿನಾದ್ಯಂತ ಬಿಗಿ ಬಂದೂಬಸ್ತ್ ಏರ್ಪಡಿಸಲಾಗಿದೆ.

NO COMMENTS

LEAVE A REPLY