ಮೇವು ಹಗರಣ: ಲಾಲುಪ್ರಸಾದ್ ಯಾದವ್ ಗೆ 5 ಲಕ್ಷ ದಂಡ,ಮೂರವರೆ ವರ್ಷ ಜೈಲು

ಮೇವು ಹಗರಣ: ಲಾಲುಪ್ರಸಾದ್ ಯಾದವ್ ಗೆ 5 ಲಕ್ಷ ದಂಡ,ಮೂರವರೆ ವರ್ಷ ಜೈಲು

182
0
SHARE

ಪಟ್ನಾ(ಜ.6.2018):ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಮೇವು ಹಗರಣದಲ್ಲಿ 3.5 ವರ್ಷ ಜೈಲು ಶಿಕ್ಷೆ ಮತ್ತು ಐದು ಲಕ್ಷ ರೂಪಾಯಿ ದಂಡ ಹೇರಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶಿವಪಾಲ್ ಸಿಂಗ್ ಅವರು ತೀರ್ಪು ನೀಡಿದ್ದಾರೆ.

1996ರಲ್ಲಿ ನಡೆದ ಬಹುಕೋಟಿ ರೂ. ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ದೋಷಿ ಎಂದು ಡಿ.23ರಂದು ಶಿವಪಾಲ್ ಸಿಂಗ್ ಅವರು ತೀರ್ಪು ನೀಡಿದ್ದರು.

ಇದರ ಬಳಿಕ 69ರ ಹರೆಯದ ಲಾಲೂ ಅವರನ್ನು ಬಿರ್ಸಾ ಮುಂಡಾದ ಸೆಂಟ್ರಲ್ ಜೈಲಿನಲ್ಲಿಡಲಾಗಿದೆ. ತನ್ನ ಅನಾರೋಗ್ಯದ ಕಾರಣ ಕೋರ್ಟಿಗೆ ಹಾಜರಾಗದ ಲಾಲೂ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ತೀರ್ಪನ್ನು ವೀಕ್ಷಿಸಿದರು. ರಾಂಚಿ ಕೋರ್ಟ್ ಮೇವು ಹಗರಣದ ಯಾವೊಬ್ಬ ಆರೋಪಿಗೂ ಜಾಮೀನು ನೀಡಿಲ್ಲ. ಆರೋಪಿಗಳು ತಮ್ಮ ಜಾಮೀನಿಗಾಗಿ ಹೈಕೋರ್ಟ್ ಗೆ ಮನವಿ ಸಲ್ಲಿಸಬೇಕು.

NO COMMENTS

LEAVE A REPLY