ಇಂದಿರಾ ಕ್ಯಾಂಟೀನ್ ಕ್ಯಾಷಿಯರ್ ಗೆ ಮೇಲಾಧಿಕಾರಿಯಿಂದ ಲೈಂಗಿಕ ಕಿರುಕುಳ

ಇಂದಿರಾ ಕ್ಯಾಂಟೀನ್ ಕ್ಯಾಷಿಯರ್ ಗೆ ಮೇಲಾಧಿಕಾರಿಯಿಂದ ಲೈಂಗಿಕ ಕಿರುಕುಳ

220
0
SHARE

ಬೆಂಗಳೂರು(ಜ,6,2018):ಇಂದಿರಾ ಕ್ಯಾಂಟೀನ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಗೆ ಮೇಲಧಿಕಾರಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದ್ದು, ಈ ಕುರಿತು ಸಂತ್ರಸ್ತ ಮಹಿಳೆ ಬಂಡೆಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬಂಡೆಪಾಳ್ಯದ ಇಂದಿರಾ ಕ್ಯಾಂಟೀನ್ ನಲ್ಲಿನ ಕ್ಯಾಷಿಯರ್ ಗೆ ಮೇಲಧಿಕಾರಿಯಾಗಿರುವ ಸತೀಶ್ ಎಂಬುವವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗುತ್ತಿದೆ. ಕ್ಯಾಂಟೀನ್ ನಲ್ಲಿ ಕ್ಯಾಷಿಯರ್ ಆಗಿ ಮುಂದುವರಿಯಬೇಕಾದರೆ ದೈಹಿಕ ಸಂಬಂಧ ಬೆಳೆಸಬೇಕೆಂದು ಮೇಲಧಿಕಾರಿ ಒತ್ತಾಯಿಸುತ್ತಿದ್ದಾರೆಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ ರಾತ್ರಿ ವೇಳೆ ಕುಡಿದು ಫೋನ್ ಮಾಡಿ ಮಾನಸಿಕ ಕಿರುಕುಳ ನೀಡುತ್ತಾರೆ ಎಂದು ದೂರಿದ್ದಾರೆ.

ಈ ಕುರಿತು ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY