ಆಧಾರ್ ಕಾರ್ಡ್ ಸಹಾಯದಿಂದ 80 ಸಾವಿರ ನಕಲಿ ಶಿಕ್ಷಕರ ಪತ್ತೆ..

ಆಧಾರ್ ಕಾರ್ಡ್ ಸಹಾಯದಿಂದ 80 ಸಾವಿರ ನಕಲಿ ಶಿಕ್ಷಕರ ಪತ್ತೆ..

218
0
SHARE

ನವದೆಹಲಿ(ಜ.06.2018): ಕೇಂದ್ರ ಸರ್ಕಾರ ಆಧಾರ್ ಗುರುತಿನ ಸಂಖ್ಯೆ ಕಡ್ಡಾಯಗೊಳಿಸಿದ ಪರಿಣಾಮವಾಗಿ ದೇಶದಲ್ಲಿ ಎರಡೆರಡು ಕಡೆ ಪೂರ್ಣಾವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 80,000 ನಕಲಿ ಉಪಾಧ್ಯಾಯರನ್ನು ಪತ್ತೆ ಹಚ್ಚಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲಗಳ ಸಚಿವಾಲಯ ತಿಳಿಸಿದೆ. ಆದರೆ, ಈ ಪ್ರಕರಣದಲ್ಲಿ ಸಿಕ್ಕಿಬಿದ್ದವರಲ್ಲಿ ಯಾರೊಬ್ಬರೂ ಕೇಂದ್ರ ಸರ್ಕಾರದ ಅಧೀನದಡಿ ಬರುವ ವಿವಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಇಲ್ಲ ಎಂದು ಎಚ್‌ಆರ್‌ಡಿ ಸಚಿವ ಪ್ರಕಾಶ್ ಜಾವಡೇಕರ್ ಸ್ಪಷ್ಟಪಡಿಸಿದ್ದಾರೆ.

ನಕಲಿ ವಿಧಾನಗಳನ್ನು ಅನುಸರಿಸುತ್ತಿದ್ದ ಉಪಾಧ್ಯಾಯರು ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಲ್ಲಿ ಪೂರ್ಣಾವಧಿಯಲ್ಲಿ ಬೋಧನೆ ಮಾಡುತ್ತಿದ್ದರು. ಆದರೆ, ಕೇಂದ್ರ ಸರ್ಕಾರ ಜಾರಿಗೊಳಿಸಿದ ಆಧಾರ್ ಕಾರ್ಡ್ ಕ್ರಮದಿಂದಾಗಿ ಇಂಥ 80 ಸಾವಿರ ನಕಲಿ ಶಿಕ್ಷಕರನ್ನು ಪತ್ತೆಹಚ್ಚಲಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

NO COMMENTS

LEAVE A REPLY