ವಿಷ್ಣುವರ್ಧನ್ ಓದಿದ ಕನ್ನಡ ಶಾಲೆ ಮುಚ್ಚಲು ನಿರ್ಧಾರ: ಅಭಿಮಾನಿಗಳಿಂದ ನಾಳೆ ಪ್ರತಿಭಟನೆ

ವಿಷ್ಣುವರ್ಧನ್ ಓದಿದ ಕನ್ನಡ ಶಾಲೆ ಮುಚ್ಚಲು ನಿರ್ಧಾರ: ಅಭಿಮಾನಿಗಳಿಂದ ನಾಳೆ ಪ್ರತಿಭಟನೆ

272
0
SHARE

ಬೆಂಗಳೂರು (ಜ.05.2018): ಡಾ. ವಿಷ್ಣುವರ್ಧನ್ ಓದಿದ ಚಾಮರಾಜಪೇಟೆಯ ಮಾಡೆಲ್ ಹೈಯರ್ ಕನ್ನಡ ಶಾಲೆಯನ್ನು ಮುಚ್ಚಲು ಸ್ಥಳೀಯ ಆಡಳಿತ ನಿರ್ಧರಿಸಿದೆ. ಈ ಶಾಲೆಗೆ 60 ಕ್ಕೂ ಹೆಚ್ಚು ವರ್ಷಗಳ ತಿಹಾಸವಿದೆ. ಕಳೆದ 25 ವರ್ಷಗಳ ಹಿಂದೆಯೇ ಆಂಗ್ಲ ಮಾಧ್ಯಮವಾಗಿ ಬದಲಾಯಿಸಿದರೆ ಶಾಲೆ ಅಭಿವೃದ್ಧಿಯಾಗುತ್ತದೆ ಎಂದು ಅನೇಕರು ಸಲಹೆ ನೀಡಿದ್ದರೂ ಕನ್ನಡದ ಮೇಲಿನ ಪ್ರೇಮದಿಂದಾಗಿ ಶಾಲಾ ಆಡಳಿತ ಮಂಡಳಿ ಇದಕ್ಕೆ ಒಪ್ಪಿರಲಿಲ್ಲ.

ಬರೀ ಅವ್ಯವಸ್ಥೆಗಳ ಆಗರವಾಗಿರುವ ಈ ಶಾಲೆಯನ್ನು ಮುಚ್ಚಲು ಸ್ಥಳೀಯ ಆಡಳಿತ ನಿರ್ಧರಿಸಿದೆ. ಇದನ್ನು ವಿರೋಧಿಸಿ ವಿಷ್ಣು ಅಭಿಮಾನಿಗಳು, ಸಾಹಿತಿಗಳು, ಕಲಾವಿದರು ಉಪ್ಪಾರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

NO COMMENTS

LEAVE A REPLY