ಕ್ಷೇತ್ರ ಬದಲಾವಣೆ ಬಗ್ಗೆ ಯೋಚನೆ ಮಾಡಿಲ್ಲ:ಹೆಚ್.ಸಿ ಮಹದೇವಪ್ಪ ಸ್ಪಷ್ಟನೆ..

ಕ್ಷೇತ್ರ ಬದಲಾವಣೆ ಬಗ್ಗೆ ಯೋಚನೆ ಮಾಡಿಲ್ಲ:ಹೆಚ್.ಸಿ ಮಹದೇವಪ್ಪ ಸ್ಪಷ್ಟನೆ..

243
0
SHARE

ಮೈಸೂರು(ಜ.2018):ಸಿ.ವಿ.ರಾಮನ್ ನಗರದಿಂದ ಕಣಕ್ಕಿಳಿಯಲು ನಿರ್ಧರಿಸಿರುವ ಬಗ್ಗೆ ಎದ್ದಿದ್ದ ಊಹಾಪೂಹಗಳಿಗೆ ತೆರೆ ಎಳೆದಿರುವ ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ, ನಾನು ಕ್ಷೇತ್ರ ಬದಲಾವಣೆ ಮಾಡೋದರ ಬಗ್ಗೆ ಯೋಚನೆ ಮಾಡಿಲ್ಲ.ಯಾವುದೇ ಕ್ಷೇತ್ರವನ್ನ ನಾನು ಹುಡುಕುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಸದ್ಯಕ್ಕೆ ನಾನು ಟಿ.ನರಸೀಪುರದ ಶಾಸಕನಾಗಿದ್ದೇನೆ. ನನ್ನ ಅವಧಿ ಮೇ ತಿಂಗಳವರೆಗು ಇದೆ. ಹೀಗಾಗಿ ಆ ನಂತರ ಪಕ್ಷ ಏನು ತಿರ್ಮಾನ ಕೈಗೊಳ್ಳೊತ್ತೋ ಅದಕ್ಕೆ ನಾನು ಬದ್ದನಾಗಿರುತ್ತೇನೆ ಎಂದರು.

ಮುಂದಿನ ಚುನಾವಣೆಗೆ ಸ್ಪರ್ಧಿಸಲು ಸಿ.ವಿ.ರಾಮನ್ ನಗರವನ್ನ ನಾನು ಆಯ್ಕೆ ಮಾಡಿಕೊಂಡಿಲ್ಲ. ಆದ್ರೆ ನನ್ನ ಪಕ್ಷದ ಇತರೆ ನಾಯಕರು ನನ್ನ ಬೆಂಗಳೂರಿಗೆ ಕರೆಯುತ್ತಿದ್ದಾರೆ. ನಂಜನಗೂಡಿನಲ್ಲು ಜನ ನನ್ನ ನೀವೆ ನಿಲ್ಲಿ ಅಂತಿದ್ದಾರೆ. ಆದ್ರೆ ಚುನಾವಣೆ ಸಂಧರ್ಭದಲ್ಲಿ ಅದನ್ನ ನಿರ್ಧಾರ ಮಾಡುತ್ತೇನೆ. ಇನ್ನು ನನ್ನ ಮಗ ಕಾಂಗ್ರೆಸ್‌ನ ಕಾರ್ಯಕರ್ತನಾಗಿದ್ದು, ಕಾರ್ಯಕರ್ತರು ಆಪೇಕ್ಷೆ ಪಟ್ಟರೆ ಅವರು ಚುನಾವಣೆ ಬರ್ತಾರೆ. ಜನರಿಗೆ ಒಳ್ಳೆಯದು ಮಾಡುವ ಉದ್ದೇಶವಿದ್ದರೇ ನನ್ನ ಮಗನಾದರೂ ಸರಿ ಯಾರೇ ಆದರೂ ಸರಿ ರಾಜಕೀಯಕ್ಕೆ ಬರಲಿ ಎಂದು ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.

NO COMMENTS

LEAVE A REPLY