ನಂಜನಗೂಡಿನಿಂದ ಮ.ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೊರಟಿರುವ ಭಕ್ತಾದಿಗಳು

ನಂಜನಗೂಡಿನಿಂದ ಮ.ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೊರಟಿರುವ ಭಕ್ತಾದಿಗಳು

227
0
SHARE

ಚಾಮರಾಜನಗರ(ಜ.5.2018):ಮೂಡಲ ಗಿರಿ, ಏಪ್ಪತ್ತೇಳು ಮಲೆ ಎಂದು ಪ್ರಖ್ಯಾತವಾಗಿರು ಮಹದೇಶ್ವರ ಬೆಟ್ಟಕ್ಕೆ ಭಕ್ತಾದಿಗಳು ಕಾಲ್ನಡಿಗೆಯಲ್ಲಿ ಹೋಗುತ್ತಿರುವ ವಿಶೇಷ ಚಿತ್ರಣ ಕಂಡುಬಂದಿದೆ.

ನಂಜನಗೂಡು ತಾಲ್ಲೂಕಿನ ದೇವಿರಮ್ಮನಹಳ್ಳಿಯ ಭಕ್ತಾದಿಗಳು ಈ ರೀತಿ ವಿಶೇಷವಾಗಿ ಕಾಲ್ನಡಿಗೆಯ ಸೇವೆ ಸಲ್ಲಿಸುತ್ತಿದ್ದಾರೆ. ನಂಜಗೂಡಿನಿಂದ ಸುಮಾರು 148 ಕಿಮೀ ಇರುವ ಮಹದೇಶ್ವರ ಬೆಟ್ಟಕ್ಕೆ ಪ್ರತಿ ವರ್ಷವು ಸಹಾ ಕಾಲ್ನಡಿಗೆಯಲ್ಲಿ ಹೋಗಲಾಗುತ್ತದೆ. 20 ಮಂದಿ ಹೊಂದಿರುವ ಭಕ್ತಾದಿಗಳ ಗುಂಪಲ್ಲಿ ಐದು ಮಂದಿ ಮಹಿಳೆಯರು ಸಹಾ ಇದ್ದು, ಬೆಟ್ಟ ತಲುಪಲು ಸರಿಸುಮಾರು ಎರಡು ರಾತ್ರಿ ಮೂರು ಹಗಲು ಕಾಲಾವಕಾಶ ಬೇಕಾಗುತ್ತದೆ ಎಂದು ತಿಳಿಸಿದರು.

ಇದರ ವಿಷೇಶತೆ ಕುರಿತು ಕೇಳಿದರೆ, ಎಲ್ಲರೂ ಸಹಾ ಬಸ್ಸಲ್ಲಿ, ಕಾರಿನಲ್ಲಿ ಹಾಗೂ ತಮ್ಮ ವಾಹನದಲ್ಲಿ ಹೋಗುತ್ತಾರೆ. ಆದರೆ ನಾವು ಭಗವಂತ ಕೊಟ್ಟಿರೊ ಕಾಲಿನ ಮೂಲಕ ಹೋಗುವುದು ನಮಗೆ ತೃಪ್ತಿ ತಂದಿದೆ ಎಂದು ಅಲ್ಲಿನ ಸದಸ್ಯ ಮಹದೇವಸ್ವಾಮಿ ಹೇಳುತ್ತಾರೆ.
ವರದಿ- ನಾಗರಾಜು.ಬೆಟ್ಟಹಳ್ಳಿ

NO COMMENTS

LEAVE A REPLY