ಸ್ಯಾಂಡಲ್ ವುಡ್ ನಲ್ಲಿ ಲವ್ ದೋಖಾ: ನಟನ ವಿರುದ್ಧ ದೂರು

ಸ್ಯಾಂಡಲ್ ವುಡ್ ನಲ್ಲಿ ಲವ್ ದೋಖಾ: ನಟನ ವಿರುದ್ಧ ದೂರು

199
0
SHARE

ಬೆಂಗಳೂರು(ಜ.5.2018):ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಲವ್, ಸೆಕ್ಸ್, ದೋಖಾ ನಡೆದಿದ್ದು, ನೊಂದ ಸಹ ನಟಿ ಆರ್.ಆರ್. ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

39 ವರ್ಷದ ಸಹನಟಿಗೆ ಇಬ್ಬರು ಮಕ್ಕಳಿದ್ದು, ಆಕೆ ವಿಧವೆ ಎಂಬುದನ್ನು ತಿಳಿದ ಸಹನಟ ಪ್ರೀತಿಸಿ ಮದುವೆಯಾಗಿದ್ದಾನೆ. 2013 ರಲ್ಲಿ ಇವರು ಸಿಗಂಧೂರಿನಲ್ಲಿ ಮದುವೆಯಾಗಿದ್ದು, ಇತ್ತೀಚೆಗೆ ಇವರ ಸಂಬಂಧದಲ್ಲಿ ಬಿರುಕು ಮೂಡಿದೆ.

‘ನಮಿತಾ ಐ ಲವ್ ಯೂ’ ಚಿತ್ರೀಕರಣದ ಸಂದರ್ಭದಲ್ಲಿ ಸಹನಟಿ ಮತ್ತು ಸಹನಟನ ನಡುವೆ ಗೆಳೆತನ ಬೆಳೆದಿತ್ತು. ನಟನ ತಾಯಿ ಮದುವೆಯನ್ನು ಒಪ್ಪದ ಕಾರಣ ಇಬ್ಬರ ನಡುವೆ ಗಲಾಟೆಯಾಗಿದೆ.

ನಟಿಯನ್ನು ಮದುವೆಯಾಗಿಲ್ಲ ಎಂದು ಸಹನಟ ಹೇಳಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಆರ್.ಆರ್. ನಗರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

NO COMMENTS

LEAVE A REPLY