ಮೈಸೂರು ಮಾಗಿ ಉತ್ಸವ:ಗಂಧದ ಸಸಿ ಮಾರಾಟಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ..

ಮೈಸೂರು ಮಾಗಿ ಉತ್ಸವ:ಗಂಧದ ಸಸಿ ಮಾರಾಟಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ..

282
0
SHARE

ಮೈಸೂರು(ಡಿ.30.2017):ನಗರದಲ್ಲಿ ಅದ್ದೂರಿಯಾಗಿ ನಡೆದ ಮೈಸೂರು ಮಾಗಿ ಉತ್ಸವದಲ್ಲಿ ಶ್ರೀಗಂಧದ ಸಸಿಗಳು ಆಕರ್ಷಣೆಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದವು.

ಚಳಿಗಾಲದಲ್ಲಿ ನಡೆಯುವ ಮಾಗಿ ಉತ್ಸವವು ಪ್ರವಾಸೋದ್ಯಮ ಇಲಾಖೆಯಿಂದ ನಡೆಯುವ ಸುಂದರ ಕಾರ್ಯಕ್ರಮವಾಗಿದೆ.ಮುಂಜಾನೆಯಿಂದಲೇ ಪ್ರಾರಂಭವಾಗಿದ್ದ ಉತ್ಸವದಲ್ಲಿ ಹಲವಾರು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಹಾಗೂ ವಿವಿಧ ಮಳಿಗೆಗಳು ಒಳಗೊಂಡಿದೆ. ಇದರಲ್ಲಿ ವಿಶೇಷವಾಗಿ ಗಂಧದಗುಡಿ ಫೌಂಡೇಶನ್ ಮತ್ತು ಮಾನವ್ ವಿಕಾಸ ಫೌಂಡೇಶನ್ ವತಿಯಿಂದ S-12 ಕ್ರಮಸಂಖ್ಯೆಯ ಮಳಿಗೆಯಲ್ಲಿ ಗಂಧದ ಸಸಿಗಳನ್ನು ಇಡಲಾಗಿದ್ದು, ಆಗಮಿಸಿದ ಪ್ರವಾಸಿಗರು ಮತ್ತು ಸಾರ್ವಜನಿಕರ ಗಮನವನ್ನು ಸೆಳೆಯಿತು.

ಸುಮಾರು 170ಕ್ಕೂ ಹೆಚ್ಚು ಗಂಧದ ಸಸಿಗಳು ಮಾರಾಟವಾಗಿದ್ದು, ಸಸಿಗಳನ್ನು ಕೊಂಡುಕೊಳ್ಳುವಲ್ಲಿ ಪರಿಸರ ಪ್ರೇಮಿಗಳು ಅದ್ಭುತವಾಗಿ ಪ್ರತಿಕ್ರಿಯಿಸಿದರು ಎಂದು ಗಂಧದಗುಡಿ ಫೌಂಡೇಶನ್ ಅಧ್ಯಕ್ಷರಾದ ಮೋಹನ್ ರವರು ಸಂತೋಷ ವ್ಯಕ್ತಪಡಿಸಿದರು.

ಮಾನವ್ ವಿಕಾಸ ಫೌಂಡೇಶನ್ ಅಧ್ಯಕ್ಷರಾದ ರಾಕೇಶ್ ಗೌಡರು ಮತ್ತು ಸದಸ್ಯರುಗಳೆಲ್ಲರು ಸಹಾ ಜನರ ಅತ್ಯುತ್ತಮ ಪ್ರತಿಕ್ರಿಯೆಗೆ ವಂದನೆ ತಿಳಿಸಿದರು.

NO COMMENTS

LEAVE A REPLY